ನನ್ನ ಜೀವನದಲ್ಲಿ ಬಾಯಿ ಮುಚ್ಚಿ ಕುಳಿತ ಮೊದಲ ಅಧಿವೇಶನವಿದು!!

ಬೆಂಗಳೂರು: 

      ನನ್ನ ಜೀವನದಲ್ಲೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ ಇದೇ ಎಂದು ಹೇಳಿ ಈಶ್ವರಪ್ಪ ದೋಸ್ತಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

     ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 6 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ಸಭೆಯು ನಡೆಯುತ್ತಿರುವಾಗ ಸಭೆ ಮಾತನಾಡಬೇಕೋ? ಅಥವಾ ಶಾಸಕರು ಮಾತನಾಡಬೇಕಾದಾಗ ಸದನ ನಡೆಯಬೇಕೋ ಎನ್ನುವುದನ್ನು ಸ್ಪಷ್ಟಪಡಿಸಿ. ಈ ಸದನದ ಗೌರವವನ್ನೇ ಮೈತ್ರಿ ನಾಯಕರು ಹಾಳು ಮಾಡಿದ್ದಾರೆ. 10 ಗಂಟೆಗೆ ಬರಬೇಕು ಎಂದಿದ್ದವರು ಇಷ್ಟೊತ್ತು ಕಳೆದರೂ ಬಂದಿಲ್ಲ. ವಿಶ್ವಾಸಮತ ಯಾಚನೆ ಮಾಡುವಾಗಲೂ ಮುಖ್ಯಮಂತ್ರಿಗಳೇ ಬಂದಿಲ್ಲ ಎಂದರೆ ಶಾಸಕರು ಯಾಕೆ ಬರುತ್ತಾರೆ? ಸದನದ ಪಾವಿತ್ರ್ಯತೆ ಕಾಪಾಡುವುದು ಸಂಬಂಧಪಟ್ಟವರ ಕರ್ತವ್ಯ ಎಂದು ದೋಸ್ತಿ ನಾಯಕರ ವಿರುದ್ಧ ಈಶ್ವರಪ್ಪ ಕೆಂಡಾಮಂಡಲವಾದರು.

      ರೆಸಾರ್ಟ್​​ನಿಂದ ಬರುವುದಕ್ಕೆ ಸ್ವಲ್ಪ ತಡವಾಗಿದೆ. ಸದನ ಮುಂದೂಡಿ ಎಂದು ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಮನವಿ ಮಾಡಿದ ಬೆನ್ನಲ್ಲೇ ಸದನದ ಗೌರವವನ್ನೇ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಈಶ್ವರಪ್ಪ ಕಿಡಿಕಾರಿದರು.

      ಯಾರು ಕೂಡ ಸಭೆಯಲ್ಲಿ ಮಾತನಾಡಬೇಡಿ ಎಂದು ನಮ್ಮ ನಾಯಕರು ನಮಗೆ ಸೂಚಿಸಿದ್ದರು. ಹೀಗಾಗಿ ಇಷ್ಟು ದಿನ ನಾನು ಸುಮ್ಮನೆ ಕುಳಿತು ಆಡಳಿತ ಪಕ್ಷದವರ ಮಾತುಗಳನ್ನು ಅಲಿಸುತ್ತಿದ್ದೆ. ಇದು ನನ್ನ ಜೀವನದಲ್ಲಿಯೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆಡಳಿತ ಪಕ್ಷದವರು ಮಾತನಾಡಲು ಸಿದ್ಧವಿಲ್ಲ. ಅದಕ್ಕೆ ಇಂದು ಮಾತನಾಡುತ್ತಿದ್ದೇನೆ ಎಂದು ಕಿಡಿಕಾರಿದರು.

 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link