ನವದೆಹಲಿ:
ಭಾರತದ ಪುಲ್ವಾಮದಲ್ಲಿ ವಿಧ್ವಂಸ ಸೃಷ್ಟಿಸಿರುವ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಜೈಷ್- ಇ- ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಸತ್ತಿಲ್ಲ, ಬದುಕಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿಗಳು ಮಾಡಿವೆ.ಜೆಇಎಂ ಮುಖಂಡ ಮೃತಪಟ್ಟಿದ್ದಾನೆ ಎಂಬುದು ಸುಳ್ಳು ಸುದ್ದಿ ಎಂದು ಜಿಯೋ ಉರ್ದು ನ್ಯೂಸ್ ವರದಿ ಮಾಡಿದೆ. ಜೆಇಎಂ ಸ್ಥಾಪಕ ಮಸೂದ್ ಅಝರ್ ಮೃತಪಟ್ಟಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದವು.ಆದಾಗ್ಯೂ, ಅಧಿಕೃತವಾದಂತಹ ಮಾಹಿತಿ ತಿಳಿದುಬಂದಿರಲಿಲ್ಲ.
ಮಸೂದ್ ಅಝರ್ ನ ಕುಟುಂಬ ಮೂಲಗಳನ್ನು ಉಲ್ಲೇಖಿಸಿ ಆತ ಜೀವಂತವಾಗಿದ್ದಾನೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಆದರೆ, ಆತನ ಆರೋಗ್ಯ ಪರಿಸ್ಥಿತಿ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
