ಬೆಂಗಳೂರು
ಎಸ್‍ಜೆ ಪಾರ್ಕ್‍ನ ನರಸಿಂಹರಾಜ ರಸ್ತೆಯ ನ್ಯೂ ರಾಜ ಬಿಲ್ಡಿಂಗ್‍ನ ಲವ್ವರ್ಸ್ ನೈಟ್ ಡ್ಯಾನ್ಸ್ ಬಾರ್ ಹಾಗೂ ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ & ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಅಶ್ಲೀಲ ನೃತ್ಯ ನಡೆಸುತ್ತಿರುವುದನ್ನು ಪತ್ತೆ ಹಚ್ಚಿ 100ಕ್ಕೂ ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ನ್ಯೂ ರಾಜ ಬಿಲ್ಡಿಂಗ್‍ನ ಲವ್ವರ್ಸ್ ನೈಟ್ ಡ್ಯಾನ್ಸ್ ಬಾರ್ ಮ್ಯಾನೇಜರ್ ಕೆಂಗೇರಿಯ ಕೊಮ್ಮಘಟ್ಟದ ಸದಾನಂದ ಪೂಜಾರಿ(52),ಹಾಗೂ ಕ್ಯಾಶಿಯರ್ ಬೆಳ್ತಂಗಡಿಯ ಮಚ್ಚಿನ ಗ್ರಾಮದ ಬಾಲಕೃಷ್ಣ ಶೆಟ್ಟಿ(44)ಬಂಧಿತ ಆರೋಪಿಗಳಾ ಗಿದ್ದಾರೆ.ಬಾರ್‍ನಲ್ಲಿದ್ದ 33 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ
ಮಹಿಳೆಯರನ್ನು ಅಕ್ರಮವಾಗಿ ಇರಿಸಿಕೊಂಡು ಆಶ್ಲೀಲ ನೃತ್ಯ ಮಾಡಿಸುತ್ತಿದ್ದಾರೆಂಬ ಮಾಹಿತಿ ಆಧರಿಸಿ ಗುರುವಾರ ರಾತ್ರಿ ಲವ್ವರ್ಸ್ ನೈಟ್ ಡ್ಯಾನ್ಸ್ ಬಾರ್ ದಾಳಿ ನಡೆಸಲಾಗಿದೆ ಮಹಿಳೆಯರಿಗೆ ಕೆಲಸದ ಅಮಿಷ ಒಡ್ಡಿ ಕರೆತಂದು ಅವರನ್ನು ಈ ಬಾರ್‍ನಲ್ಲಿ ಬಾರ್ ಗರ್ಲ್‍ಗಳಾಗಿ ಕೆಲಸಕ್ಕೆ ನೇಮಿಸಿಕೊಂಡು, ಕ್ರಮೇಣ, ಅವರಿಗೆ ಅಶ್ಲೀಲ ಉಡುಗೆ-ತೊಡುಗೆಗಳನ್ನು ಹಾಕಿಸಿ ಬಲವಾಂತವಾಗಿ ನೃತ್ಯ ಮಾಡಿಸುತ್ತಾ,
ಇದರಿಂದ ಗಿರಾಕಿಗಳು ಪ್ರಚೋದನೆಗೊಳಗಾಗಿ ಮಹಿಳೆಯರ ಮೇಲೆ ಹಣ ಎಸಿಯುವಂತೆ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ ದಾಳಿ ವೇಳೆ ಡ್ಯಾನ್ಸ್ ಬಾರ್‍ನ ಮಾಲೀಕರಾದ ಯತೀಶ್ ಚಂದ್ರಶೆಟ್ಟಿ ಮತ್ತು ನರೇಂದ್ರ ಬಾಬು ಹಾಗೂ ಕಟ್ಟಡದ ಮಾಲೀಕರಾದ ಸುದೀಂದ್ರ ಬಾಬು ರವರುಗಳು ತಲೆ ಮರೆಸಿಕೊಂಡಿದ್ದು, ಇವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್ ತಿಳಿಸಿದ್ದಾರೆ.
ರೆಸಿಡೆನ್ಸಿ ರಸ್ತೆಯಲ್ಲಿರುವ ಪೇಜ್-3 ಬಾರ್ & ರೆಸ್ಟೋರೆಂಟ್ ಎಂಬ ಲೈವ್ ಬ್ಯಾಂಡ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ಅಕ್ರಮವಾಗಿ ಇರಿಸಿಕೊಂಡು ಆಶ್ಲೀಲ ನೃತ್ಯ ಮಾಡಿಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಬಾರ್‍ನಲ್ಲಿದ್ದ ಗಿರಾಕಿಗಳು ಸೇರಿದಂತೆ ಬಾರ್‍ನಲ್ಲಿ ಕೆಲಸಮಾಡುತ್ತಿದ್ದ 20 ಜನರನ್ನು ಬಂಧಿಸಿ 88,200/-ರೂ ನಗದು, ಟೋಕನ್‍ಗಳು, ಮ್ಯೂಸಿಕ್ ಸೆಟ್, ಹಣ ಎಣಿಕೆ ಯಂತ್ರವನ್ನು ವಶಪಡಿಸಿಕೊಂಡು ವಿವಿಧ ರಾಜ್ಯ 71 ಮಹಿಳೆಯರನ್ನು ರಕ್ಷಿಸಲಾಗಿದೆ.
ದಾಳಿ ವೇಳೆ ಬಾರ್ & ರೆಸ್ಟೋರೆಂಟ್‍ನ ಮಾಲೀಕರಾದ ಗೋವಿಂದರಾಜು ಮತ್ತು ಮೇಲ್ವಿಚಾರಕರುಗಳಾದ ಪ್ರಶಾಂತ್, ಪ್ರವೀಣ್ ಮತ್ತು ಸುನೀತಾ ಎಂಬುವವರು ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








