ಹಾವೇರಿ
ಹಾವೇರಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮಾದರಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕರಾದ ನೆಹರು ಓಲೇಕಾರ ಅವರು ಹೇಳಿದರು.ನಗರದ ಮುನ್ಸಿಪಲ್ ಹೈಸ್ಕೂಲ್‍ನಲ್ಲಿ ಶುಕ್ರವಾರ ಪರಿಶಿಷ್ಟಜಾತಿ / ಪರಿಶಿಷ್ಟ ಪಂಗಡ ಮಾದರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಅನೇಕ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಕಾಲೇಜು ಅನುಕೂಲಕರವಾಗಿದೆ. ಜಿಲ್ಲೆಯಿಂದ ಕೈತೆಪ್ಪಿ ಹೋಗುತ್ತಿದ್ದ ಈ ಕಾಲೇಜನ್ನು ಹೋರಾಟದ ಮೂಲಕ ಉಳಿಸಿ ಇಂದು ಸುಮಾರ 66 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಶೀಘ್ರದಲ್ಲಿ ಸೂಕ್ತ ನಿವೇಶನ ಹುಡುಕಿ ಕಟ್ಟಡ ಪ್ರಾರಂಭಿಸಲಾಗುವುದು. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದರೊಂದಿಗೆ ಈ ಕಾಲೇಜನ್ನು ರಾಜ್ಯದಲ್ಲಿಯೇ ಮಾದರಿ ಕಾಲೇಜನ್ನಾಗಿ ರೂಪಿಸಲಾಗುವುದು ಎಂದು ಹೇಳಿದರು.
ಈ ಕಾಲೇಜಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದು ಸಂತಸದಾಯಕವಾಗಿದೆ. ಪ್ರವೇಶಾತಿ ಸಂಖ್ಯೆಯನ್ನು ಗಮನಿಸಿದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೆರಿಟ್ ಮೂಲಕ ಪ್ರವೇಶಾತಿ ಪಡೆಯುವ ಸಂದರ್ಭ ಸೃಷ್ಠಿಯಾಗಬಹುದು. ಪ್ರವೇಶಾತಿ ಪಡೆದಎಲ್ಲಾ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಹೆಚ್ಚಿನ ಅಂಕಗಳನ್ನು ಪಡೆಯುವಂತಾಗಲಿ ಎಂದು ಶುಭಕೋರಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ ಎನ್.ತೆವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಜಗದ ಕಾರ್ಯಕ್ರಮ ನಿರೂಪಿಸಿದರು, ಎಮ್. ಬಿ. ಕಬ್ಬೂರ ವಂದಿಸಿದರು.
ಕಾರ್ಯಕ್ರಮದಲ್ಲಿ ನಾಗರಾಜ ಬಸೆಗಣ್ಣಿ, ಮುತ್ತಣ್ಣ ಎಲಿಗಾರ, ಅಶೋಕ ಬಣಕಾರ, ಶ್ರೀಮತಿ ಲಲಿತಾ ಗುಂಡೆನಹಳ್ಳಿ, ಶ್ರೀಮತಿ ರತ್ನಾ ಭೀಮಕ್ಕನವರ, ಸ.ಪ.ಪೂ.ಕಾಲೇಜು ಪ್ರಾಂಶುಪಾಲ ವ್ಹಿ.ಜಿ.ಪೂಜಾರ, ಸ.ಮ.ಪ್ರ.ದರ್ಜೆಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಬೀಬಿ ಫಾತಿಮಾ ಹಾಗೂ ಪ್ರಮೋದ ನೆಲವಾಗಲ, ಪ್ರಕಾಶ ಬಾರ್ಕೆರ, ವೀರೇಶ ಹಿತ್ತಲಮನಿ, ಪ್ರೋ. ಎಮ್. ಹೆಚ್. ಹೆಬ್ಬಾಳ, ಪ್ರೊ ವಾಯ್. ಮದ್ದನಸ್ವಾಮಿ, ಪ್ರೊ. ಶಿವಾನಂದ ಕೆಂಪಳ್ಳರ, ಡಾ.ಜಗನಾಥ ಗೇನಣ್ಣವರ, ಡಾ. ಗಂಗಮ್ಮ ಎಮ್., ಪ್ರೊ. ಸಂದ್ಯಾಕುಮಾರಿ ಎಮ್, ಶ್ರೀಮತಿ ಅಂಜಲಿದೇವಿ ಎಮ್, ಕು.ರಶ್ಮೀ ಚಂದ್ರಗಿರಿ, ಡಾ.ಶೋಭಾ ತಪಶಿ, ಶಂಭುಲಿಂಗಪ್ಪ ದೊಡ್ಡಮನಿ ಹಾಗೂ ಕಾಲೇಜಿನ ಸಿಬ್ಬದಿ ವರ್ಗದವರಾದ ಆರ್.ಎಫ್ ಗಾಳೆಪ್ಪನವರ, ಶಿವುಕುಮಾರ ಉನ್ನಿಭಾವಿ, ಕು. ಜಮೀರಾಭಾನು, ಶ್ರೀಮತಿ ಭಾಗ್ಯವತಿ ನೇಕಾರ, ಶ್ರೀಮತಿ ಕಲಾವತಿ ಇತರರು ಉಪಸ್ಥಿತರಿದ್ದರು.