ಕೇಂದ್ರೀಕರಣದ ವಿರುದ್ಧ ಪ್ರಗತಿಪರರು ಒಗ್ಗೂಡಬೇಕು : ಬರಗೂರು ರಾಮಚಂದ್ರಪ್ಪ

ಬೆಂಗಳೂರು

   ದೇಶದಲ್ಲಿ ಕೇಂದ್ರೀಕರಣ,ದೇಗುಲಿಕರಣ ಹುಸಿ ರಾಷ್ಟ್ರೀಯತೆಯ ಹುನ್ನಾರವನ್ನು ಪ್ರಗತಿಪರರು ಒಟ್ಟಾಗಿ ವಿರೋಧಿಸಬೇಕಾದ ಅನಿವಾರ್ಯತೆಯನ್ನು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರೀಕರಣಗೊಳ್ಳಿಸಲಾಗಿದೆ.

   ಇಂತಹ ನಿರ್ಧಾರಗಳ ವಿರುದ್ಧ ನೈತಿಕ ಪ್ರಜ್ಞೆ ಇಲ್ಲದಿದ್ದಲ್ಲಿ ಅಪಾಯ ಬಂದೊಗಲಿದೆ ಸಿಇಟಿ ಬದಲು ನೀಟ್ ಪರೀಕ್ಷೆ ಜಿಎಸ್‍ಟಿ ಪದ್ಧತಿ, ಭಯೋತ್ಪಾದನಾ ವಿರೋಧಿ ಕಾನೂನು ಇಂತಹ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡಿ ಕೇಂದ್ರೀಕರಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.

   ನಗರದ ಗಾಂಧಿ ಭವನದಲ್ಲಿ ಜನ ಕ್ರಾಂತಿ ವೇದಿಕೆ ಆಯೋಜಿಸಿದ ಆಗಸ್ಟ್ ಕ್ರಾಂತಿಯ ಹೊಸ ಸಂದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಹೆಸರು ಪ್ರಸ್ತಾಪಿಸದೇ ಧಾರ್ಮಿಕ ಮೂಲವಾದಿ ಪಕ್ಷಗಳಿಗೆ ಉತ್ತರವನ್ನು ನೀಡಬೇಕಾದ ಸಂದರ್ಭ ಎದುರಾಗಿದೆ ಎಂದು ಹೇಳಿದರು.

   ಶ್ರೀರಾಮನ ಹೆಸರನ್ನು ಮತಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅವರಿಗೆ ಶಬರಿ ಅಥವಾ ಭರತ ಬೇಡವಾಗಿತ್ತೇ ಎಂದು ಪ್ರಶ್ನಿಸಿದ ಬರಗೂರು ರಾಮಚಂದ್ರಪ್ಪ ಅವರು ಇಂತಹ ಮೂಲಭೂತ ವಾದಿಗಳಿಂದ ದೇಶವನ್ನು ಕಾಪಾಡಬೇಕಾಗಿದೆ ಎಂದು ಹೇಳಿದರು.ಧಾರ್ಮಿಕ ಮೂಲಭೂತವಾದದೊಂದಿಗೆ ರಾಷ್ಟ್ರೀಯ ವಾದವನ್ನು ಬಿಂಬಿಸಲಾಗುತ್ತಿದೆ.

   ಮೂಲ ಆಶಯವನ್ನು ಬೀಜ ರೂಪದಲ್ಲಿಟ್ಟುಕೊಂಡೇ ಪ್ರಗತಿಪರರು ಇದಕ್ಕೆ ತಕ್ಕ ಉತ್ತರ ಕೊಡಬೇಕಿದೆ ಮಹಾತ್ಮ ಗಾಂಧೀಜಿ ಅವರ ನೈತಿಕ ಪ್ರಜ್ಞೆ, ಅಂಬೇಡ್ಕರ್ ಅವರ ಸಾಮಾಜಿಕ ಪ್ರಜ್ಞೆ, ಲೋಹಿಯಾ ಅವರ ಸಾಂಸ್ಕೃತಿಕ ಪ್ರಜ್ಞೆ, ವಿವೇಕಾನಂದರ ಧಾರ್ಮಿಕ ಪ್ರಜ್ಞೆ. ಕಾಲ್ ಮಾಕ್ರ್ಸ್ ಅವರ ಆರ್ಥಿಕ ಪ್ರಜ್ಞೆಯನ್ನು ಇಟ್ಟುಕೊಂಡು ಹೊಸ ಸಂದೇಶವನ್ನು ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.

   ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಎತ್ತಿಕಟ್ಟುವ ಹುನ್ನಾರ ನಡೆಸಲಾಗುತ್ತಿದೆ. ಈ ಬಗ್ಗೆ ಮರು ಆಲೋಚನೆ ಮಾಡುವ ಅನಿವಾರ್ಯತೆ ಇದೆ ಎಂದ ಅವರು ಒಂದು ವಾದವನ್ನು ಇನ್ನೊಂದು ವಾದದೊಂದಿಗೆ ಚರ್ಚೆ ನಡೆಸದಿದ್ದರೆ ಅದು ಮನುಶಾಸ್ತ್ರ ಎನಿಸಿಕೊಳ್ಳಲಿದೆ ಈ ಯುವಕರನ್ನು ದೇವರು, ಧರ್ಮ ಎಂಬ ಸಾಮೂಹಿಕ ಸನ್ನಿಯಿಂದ ಬಿಡಿಸಿಕೊಂಡು ಬರಬೇಕಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಪ್ರೊ.ಬಾಬು ಮ್ಯಾಥ್ಯೂ, ಸಾಹಿತಿ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಬಾಪು ಹೆದ್ದೂರ್ ಶೆಟ್ಟಿ, ಮತ್ತಿತರರು ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link