ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಬೇಟಿ

 ಹರಪನಹಳ್ಳಿ:

      ಉತ್ತರ ಕರ್ನಾಟಕದಲ್ಲಿ ಸುರಿದ ಬಾರಿ ಮಳೆಯಿಂದಾಗಿ ಉಂಟಾದ ನೆರೆ ಹಾವಳಿ, ತುಂಬಿದ ನದಿಗಳಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳ ತಂಡಗಳನ್ನು ರಚಿಸಿ ನದಿ ಪಾತ್ರದ ಜನತೆಗೆ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ  ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

      ತಾಲೂಕಿನ ನದಿಪಾತ್ರದ ಗ್ರಾಮಗಳಾದ ಹಲವಾಗಲು, ನಿಟ್ಟೂರು ಬಸಾಪುರ, ನಿಟ್ಟೂರು, ಗರ್ಭಗುಡಿ, ತಾವರೆಗುಂದಿ, ನಂದ್ಯಾಲ, ಕಡತಿ, ವಟ್ಲಹಳ್ಳಿ ಸ್ಥಿತಿ ಗತಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರ ಆಣೆಕಟ್ಟಿನಿಂದ 1.85 ಲಕ್ಷ ಕ್ಯೂಸೆಟ್ ನೀರನ್ನು ಬಿಡಲಾಗಿದೆ. ಇತರೆ ಕಡೆಗಳಿಂದ 25 ಸಾವಿರ ಕ್ಯೂಸೆಟ್ ನೀರು ಕೂಡ ನದಿಗೆ ಸೇರ್ಪಡೆಯಾಗುತ್ತಿದೆ. ಪ್ರತೀಕ್ಷಣ ನೀರಿನ ಮಟ್ಟ ಹೆಚ್ಚುತ್ತಿದ್ದು, ರಾತ್ರಿವೇಳೆ ನದಿನೀರಿನ ಮಟ್ಟ ಹೆಚ್ಚಾದರೆ ಜನತೆಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಆಶ್ರಯ ಕೇಂದ್ರಗಳಿಗೆ ಬರುವಂತೆ ಮನವಿ ಮಾಡಿದ್ದೇವೆ. ಸಂತ್ರಸ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆ ಕಳೆದುಕೊಂಡವರ ಮಾಹಿತಿ ಪಡೆದು ಪರ್ಯಾಯ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಆಸರೆ ಕೇಂದ್ರಗಳಲ್ಲಿ ಆಸರೆ ಪಡೆಯುವಂತೆ ಅವರ ಮನವೊಲಿಸಲು ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.

      ಸಂತ್ರಸ್ತರ ಕ್ಷಣ ಕ್ಷಣದ ಮಾಹಿತಿ ಮತ್ತು ಸಹಾಯಹಸ್ತಕ್ಕಾಗಿ ಪ್ರತೀ 3 ಗ್ರಾಮ ಪಂಚಾಯಿತಿಗೆ 3 ತಂಡಗಳನ್ನು ರಚಿಸಲಾಗಿದೆ. ಅಂಬುಲೆನ್ಸ್, ಸೇರಿದಂತೆ ಅನುಕೂಲಕ್ಕಾಗಿ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇರುವಂತೆ ಸೂಚಿಸಲಾಗಿದೆ ಎಂದರು.

      ಸಂಪರ್ಕ ಕಡಿದುಕೊಂಡ ಗರ್ಭಗುಡಿ- ಹಲವಾಗಲು, ನಿಟ್ಟೂರು-ದುಗ್ಗಾವತಿ ಗ್ರಾಮಗಳ ರಸ್ತೆಗಳಿಗೆ 2 ಸೇತುವೆ ನಿರ್ಮಾಣಕ್ಕೆ 4.5 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ರಿಯಾಯೋಜನೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು. ಬೆಳೆಹಾನಿ ಅಮೀಕ್ಷೆ ಮಾಡಿ ವರಧಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಹಾನಿಯಾದ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು.

      ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರಾಮಗಳಲ್ಲೇ ವಾಸ್ಥವ್ಯ ಇರುವಂತೆ ಸೂಚಿಸಲಾಗಿದೆ. ನದಿ ನೀರಿನ ಹೆಚ್ಚಳದಿಂದ ನದಿಪಾತ್ರದ ಜನತೆಗೆ ಆಗುವ ತೊಂದರೆಗಳ ಮಾಹಿತಿ ತಕ್ಷಣದಲ್ಲೇ ಒದಗಿಸಲು ಮತ್ತು ಸೂಕ್ತ ಕ್ರಮ ಕೈಗೊಳ್ಳಲು ನದಿಪಾತ್ರದ ಪ್ರದೇಶಗಳಲ್ಲಿ ಬೀಡು ಬಿಡುವಂತೆ ಸೂಚಿಸಲಾಗಿದೆ ಎಂದರು.

      ನೆರೆಪೀಡಿತ ಪ್ರದೇಶಗಳ ವೀಕ್ಷಣೆಯ ವೇಳೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನಿತೀಶ್, ಎಸ್‍ಪಿ ಬಿ.ಕೆ.ಬಾಬಾ, ಎಸಿ ಪ್ರಸನ್ನಕುಮಾರ್ ವಿ.ಕೆ., ತಹಸಿಲ್ದಾರ್ ಡಾ.ನಾಗವೇಣಿ, ತಾಪಂ ಇಓ ಮಮತಾ ಹೋಸಗೌಡರ್, ಟಿಎಸ್‍ಡಬ್ಲ್ಯೂ ಆನಂದ್ ವೈ.ಡೊಳ್ಳಿನ, ಬಿಸಿಎಂ ಅಧಿಕಾರಿ ಭೀಮಾನಾಯ್ಕ್, ಡಿವೈಎಸ್‍ಪಿ ನಾಗೇಶ ಐತಾಳ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ್, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಆರ್.ಲೋಕೇಶ್, ಸಣ್ಣಹಾಲಪ್ಪ, ಸೇರಿದಂತೆ ಅನೇಕ ಅಧಿಕಾರಿಗಳು ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link