ದಾವಣಗೆರೆ :
ಪ್ರಕೃತಿ ವಿಕೋಪದಿಂದ ಪಾರಾಗಲು, ಎಲ್ಲರೂ ಪರಿಸರಸ್ನೇಹಿ ಜೀವನ ನಡೆಸುವುದು ಅವಶ್ಯವಾಗಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ಶ್ರೀಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ಯೋಗಬಂಧುಗಳು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡಿದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿ ಕೊಡುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಪರಿಸರ ಸ್ನೇಹಿ ಜೀವನ ನಡೆಸಿದಾಗ ಮಾತ್ರ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಪಾರಾಗಲು ಸಾಧ್ಯವಾಗಲಿದೆ. ಆದ್ದರಿಂದ ಯಾರೂ ಸಹ ದುರಾಸೆಗೆ ಒಳಗಾಗಿ ನೈಸರ್ಗಿಕ ಸಂಪತ್ತನ್ನು ದುರುಪಯೋಗ ಪಡೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಪ್ರಕೃತಿ ಮುಖಿ ಜೀವನ ನಡೆಸಿದರೆ, ಯಾವುದೇ ಅನಾಹುತ ಸಂಭವಿಸುವುದಿಲ್ಲ. ಆದರೆ, ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣವಾಗಿವೆ. ಪ್ರಕೃತಿಯ ಅಸಮತೋಲನತೆಯಿಂದಾಗಿ ಇಂತಹ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕಳೆದ ವರ್ಷವೂ ಕೊಡಗಿನಲ್ಲಿ ಇಂತಹ ಅತಿವೃಷ್ಠಿ ಸಂಭವಿತ್ತು. ಈ ಬಾರಿ ರಾಜ್ಯದ 17 ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದ ಲಕ್ಷಾಂತರ ಜನರು ಸಂಕಷ್ಟ ಎದುರಿಸುವಂತಾಗಿದೆ. ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪರಿಸರ ಸಂರಕ್ಷಣೆಯೊಂದಿಗೆ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವುದು ಮಾನವ ಧರ್ಮ. ಇಂತಹ ಮಾನವ ಧರ್ಮ ಕಾರ್ಯಕ್ಕೆ ಚಿತ್ರದುರ್ಗದ ಮುರುಘಾ ಶರಣರು ಯಾವತ್ತು ಮುಂದು. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ತೊಂದರೆ ಒಳಗಾದ ಅಥಣಿ, ಚಿಕ್ಕೋಡಿ, ರಾಯಭಾಗ ಸೇರಿದಂತೆ ವಿವಿಧ ನೆರೆ ಸಂತ್ರಸ್ತರ ಬಳಿ ಮುರುಘಾ ಶರಣರು ತೆರಳಿ, ಅವರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ, ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳನ್ನು ನೀಡಿ, ಅವರಿಗೆ ಧೈರ್ಯ ತುಂಬಿದ್ದಾರೆ ಎಂದರು.
ನೆರೆ ಸಂತ್ರಸ್ತರ ಉಪಯೋಗಕ್ಕಾಗಿ ಸಾಮಗ್ರಿಗಳನ್ನು ಕಳುಹಿಸುತ್ತಿರುವ ಶ್ರೀಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ಕಾರ್ಯ ಶ್ಲಾಘನೀಯವಾಗಿದ್ದು, ಕಳೆದ ವóರ್ಷ ಕೊಡಗಿನಲ್ಲಿ ನಡೆದ ಅತಿವೃಷ್ಠಿಯಿಂದ ತೊಂದರೆಗೆ ಒಳಗಾದ ಜನರ ಸಂಕಷ್ಟಗಳಿಗೆ ಸ್ಪಂದಿಸಲಾಗಿತ್ತು. ಈ ವರ್ಷವೂ ಅವೃತಿಷ್ಠಿಯಿಂದ ತೊಂದರೆಗೆ ಒಳಗಾದ ಉತ್ತರ ಕರ್ನಾಟಕ ಜನರ ಸಮಸ್ಯೆಗೆ ಸ್ಪಂದಿಸುತ್ತಿರುವುದು ಎಲ್ಲ ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‍ನ ಖಜಾಂಚಿ ಎಸ್.ಜಿ.ಉಳುವಯ್ಯ, ಬೆಳ್ಳೂಡಿ ಶಿವಕುಮಾರ್, ಶರಣಾರ್ಥಿ ಬಕ್ಕಪ್ಪನವರು, ಉಮಾಶಂಕರ್ ಕೆ.ಎಂ, ಮಂಜಣ್ಣ, ಭಾರತಿ, ನೀಲಮ್ಮ, ಗೌರಮ್ಮ, ಗೌರಮ್ಮ, ಅನಿತಾ, ಸುಲೋಚನಾ, ಮಂಜುಳಾ, ಮಮತಾ, ರತ್ನಾ ವಿ.ಕೇಣಿ, ಗಂಗಾ, ಶರಬೇಶ್ವರ ಭಾರತಿ, ಸ್ವರ್ಣಗಾರ ವಿಶ್ವೇಶ್ವರರಾವ್, ಗಾಯತ್ರಿ, ಸೂರಜ್, ವಿಶ್ವಾರಾಧ್ಯ, ಕಿರಣ್, ಭಾರತಿ, ಗಾಯತ್ರಿ, ಎಲ್.ಎಸ್.ಚನ್ನಬಸಪ್ಪ, ಸುಮಾ, ಸೋಮಣ್ಣ, ಮಂಜುನಾಥ ಸಿ,, ಜಿ.ಎಸ್.ವೀರಣ್ಣ, ಸುಭಾಷ್ ಬಣಗಾರ್, ಶಾಂತಕುಮಾರ್ ಸೋಗಿ, ರವಿಕುಮಾರ್ ಆರ್.ವಿ., ಸಂಜಕುಮಾರ್ ಬಿ.ಎಸ್,, ಸಿದ್ದೇಶ್ ಬಿ.ಎಸ್, ಪುಟ್ಟರಾಜು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
