ಮತಿಘಟ್ಟದಲ್ಲಿ ಪುರಾತನ ಕಲ್ಯಾಣಿ ಸ್ವಚ್ಚತೆ

ಹುಳಿಯಾರು:

      ಹುಳಿಯಾರು ಸಮೀಪದ ಮತಿಘಟ್ಟದಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಎನ್‍ಆರ್‍ಎಲ್‍ಎಂ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರಾತನ ಕಲ್ಯಾಣಿ ಸ್ವಚ್ಚ ಮಾಡಲಾಯಿತು.ಈ ಪುರಾತನ ಕಲ್ಯಾಣಿ ಇಡೀ ಊರಿನ ಜನರಿಗೆ ಕುಡಿಯುವ ನೀರಿನ ಆಸರೆಯಾಗಿತ್ತು. ಅಲ್ಲದೆ ಊರಿನಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಹಾಗೂ ಶುಭ ಕಾರ್ಯಗಳಿಗೆ ಇಲ್ಲಿನ ಕಲ್ಯಾಣಿ ನೀರು ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಬರಿದಾದ ಕಾರಣದಿಂದ ಕಲ್ಯಾಣಿಯಲ್ಲಿ ನೀರು ಬತ್ತಿ ಹೋಗಿತ್ತು.

       ಹಾಗಾಗಿ ಕಲ್ಯಾಣಿಯಲ್ಲಿ ಅನಗತ್ಯ ಗಿಡಗಂಟೆಗಳು ಬೆಳೆದು ಸ್ಥಳೀಯರಾರೂ ಕಲ್ಯಾಣಿ ಬಳಿ ಹೋಗದಂತ್ತಾಗಿತ್ತು. ಅಲ್ಲದೆ ಬರೋಬ್ಬರಿ 8 ಅಡಿಗಳಷ್ಟು ಊಳು ತುಂಬಿ ಮಳೆ ಬಂದರೂ ನೀರು ನಿಲ್ಲದಂತ್ತಾಗಿತ್ತು. ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಮಾಡುವ ಸಲುವಾಗಿ ಗ್ರಾಪಂ ಮಹಿಳಾ ಸಂಘಗಳ ಸಹಕಾರ ಪಡೆದು ಸ್ವಚ್ಚತೆಗೆ ನಿರ್ಧರಿಸಿತ್ತು.

     ತಾಪಂ ಇಓ ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶೈಲಾ, ಸದಸ್ಯರಾದ ಮಂಜುಳಾ, ಆನಂದ್, ಎನ್‍ಆರ್‍ಎಲ್ ಲೀಲಾವತಿ ಅವರ ನೇತೃತ್ವದಲ್ಲಿ ಮಹಿಳೆಯರು, ಪೌರಕಾರ್ಮಿಕರು ಹಾಗೂ ಊರಿನ ಜನರು ಸೇರಿ ಕಲ್ಯಾಣಿಯಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕಿತ್ತರು. 8 ಅಡಿಗಳಷ್ಟು ತುಂಬಿದ್ದ ಊಳನ್ನು ತೆಗೆದು ಇಡೀ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link