ಚಾಮರಾಜನಗರ :
2 ಸಾವಿರ ರೂ.ಮುಖ ಬೆಲೆಯ ಸುಮಾರು ಮೂರು ಕೋಟಿಗೂ ಹೆಚ್ಚು ಮೌಲ್ಯದ ಖೋಟಾ ನೋಟನ್ನು ಅಕ್ರಮವಾಗಿ ಗೂಡ್ಸ್ ಆಟೋವೊಂದರಲ್ಲಿ ಸಾಗಣೆ ಮಾಡುತ್ತಿದ್ದ ಭಾರಿ ಸಂಖ್ಯೆಯ ಖೋಟಾ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈಗಾಗಲೇ 15 ದಿನಗಳ ಹಿಂದೆ ಖೋಟಾ ನೋಟ್ ಸಾಗಾಣೆಯ ಬಗ್ಗೆ ಮಾಹಿತಿ ಇತ್ತು. ಈ ಮಾಹಿತಿಯನ್ನು ಆಧರಿಸಿ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಯಿತು.
ಚಾಮರಾಜನಗರದಿಂದ ರಾಷ್ಟ್ರೀಯ ಹೆದ್ದಾರಿ 209ರ ಮೂಲಕ ತಮಿಳುನಾಡು ಕಡೆಗೆ ಸಾಗಿಸಲಾಗುತ್ತಿತ್ತು. ಇವು 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ಮಾದರಿಯ ನೋಟುಗಳಾಗಿವೆ.
ಖೋಟಾ ನೋಟ್ ಸಾಗಣೆ ಮಾಡುತ್ತಿದ್ದ ವಾಹನದ ಚಾಲಕನನ್ನು ಬಂಧಿಸಿ, ಆತನಿಂದ ಎಲ್ಲ ಖೋಟಾ ನೋಟುಗಳನ್ನು ವಶಪಡೆದುಕೊಂಡು ಆತನನ್ನು ವಿಚಾರ ಮಾಡಿದ ವೇಳೆ ನಾನು ಸರಗೂರು ಪಟ್ಟಣದವನು. ನನ್ನ ಹೆಸರು ಕಾರ್ತಿಕ್. ನನ್ನನ್ನು ವಾಹನ ಚಾಲನೆಗಾಗಿ ಮಾತ್ರ ಕರೆದುಕೊಂಡು ಬಂದರು. ಅವರು ಯಾರು ಎಂದು ಗೊತ್ತಿಲ್ಲ. ಜೊತೆಗೆ ಇದರಲ್ಲಿ ಖೋಟಾ ನೋಟ್ ಇದೆ ಎನ್ನುವ ಬಗ್ಗೆ ಸಹಾ ನನಗೆ ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈ ಖೋಟಾ ನೋಟ್ ಸಾಗಣೆ ಮಾಡುತ್ತಿದ್ದವರು ಯಾರು? ಎಷ್ಟು ಪ್ರಮಾಣದಲ್ಲಿ ಇದೆ, ಇದರ ಮೂಲ ಯಾವುದು? ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ