ಸಿನಿಮಾದಲ್ಲಿ ಚಾನ್ಸ್ ಕೊಡಿಸುದಾಗಿ ಮೋಸ ಮಾಡಿದ ಖದೀಮ.!

ಬೆಂಗಳೂರು

    ಕನ್ನಡ ಚಲನಚಿತ್ರ ಹೆಸರು ಮತ್ತು ಭಾವಚಿತ್ರ ಬಳಸಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ಅಸಲಿಯಂತೆ ನಟಿಸಿ ಯುವತಿಯರನ್ನು ಪರಿಚಯಿಸಿಕೊಂಡು ಸಲಿಗೆ ಬಳಸಿ ಚಲನಚಿತ್ರಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬ ಸೈಬರ್ ಕ್ರೈಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

    ಸುಂಕದಕಟ್ಟೆಯ ಹೊಯ್ಸಳ ನಗರದ ವೆಂಕಟೇಶ್ ಭಾವಸಾ (22) ಬಂಧಿತ ಆರೋಪಿಯಾಗಿದ್ದಾನೆ,ಆರೋಪಿಯು ಚಲನಚಿತ್ರ ನಟರ ಹೆಸರಿನಲ್ಲಿ ನಕಲ್ ಫೇಸ್‍ಬುಕ್ ಖಾತೆ ತೆರೆದು ಯುವತಿರನ್ನು ಪರಿಚಯಿಸಿಕೊಂಡು ಸಲಿಗೆಯಿಂದ ಚಾಟಿಂಗ್ ಮಾಡಲು ಪ್ರಾರಂಭಿಸುತ್ತಿದ್ದ. ನಂತರ ಅವರ ಪುತ್ರಿಗೆ ಚಲನಚಿತ್ರದಲ್ಲಿ ಅವಕಾಶ ಕಲ್ಪಿಸಲು ತನ್ನ ಸಹಾಯಕ ವೆಂಕಿರಾವ್ ಎಂಬುವರನ್ನು ಸಂಪರ್ಕಿಸುವಂತೆ ವಾಟ್ಸಾಪ್ ನಂಬರ್ ನೀಡುತ್ತಿದ್ದ.

   ನಂತರ ತಾನೇ ವೆಂಕಿರಾವ್ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಚಾಟಿಂಗ್ ನಡೆಸಿ ಪರಿಚಿತರನ್ನು ಭೇಟಿ ಮಾಡಿ ತಮಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 25 ಸಾವಿರ ರೂ.ಗಳನ್ನು ಪಡೆದು ವಂಚಿಸುತ್ತಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.

    ಆರೋಪಿಗೆ ಪರಿಚಯವಾಗಿದ್ದ ಮಹಿಳೆಯೊಬ್ಬರು ತನ್ನ ಮಗಳಿಗೆ ಸಿನೆಮಾದಲ್ಲಿ ಅವಕಾಶ ಮಾಡಿಕೊಂಡುವಂತೆ ಕೇಳಿಕೊಂಡು 25 ಸಾವಿರ ನೀಡಿದ್ದರು ಆನಂತರ ಯಾವುದೇ ಕರೆ ಬಾರದಿದ್ದರಿಂದ ಆರೋಪಿ ನೀಡಿದ ವಾಟ್ಸಾಪ್ ಸಂಖ್ಯೆಗೆ ವೀಡಿಯೊ ಕಾಲ್ ಮಾಡಲು ನೊಂದ ಮಹಿಳೆಯು ಪ್ರಯತ್ನಿಸಿದಾಗ ಕಾಲ್ ರಿಸೀವ್ ಮಾಡಿ ಕಾಲ್ ಮರ್ಜ್ ಆಗಿದೆ ಎಂದು ನೆಪ ಹೇಳಿ ನುಣುಚಿಕೊಂಡಿದ್ದನು.

   ತಮ್ಮ ಹೆಸರನ್ನು ಫೇಸ್‍ಬುಕ್ ಖಾತೆಗೆ ಬಳಸಿದ್ದಾರೆ ಎಂದು ಚಲನಚಿತ್ರ ನಟರೊಬ್ಬರು ನೀಡಿದ್ದ ದೂರು ದಾಖಲಿಸಿ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಸಾಮಾಜಿಕ ಜಾಲ ತಾಣಗಳ ಬಳಕೆದಾರರು ಯಾವುದೇ ಕಾರಣಕ್ಕೂ ಗಣ್ಯ ಹಾಗೂ ಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಪಾಟ್ಸಾಪ್ ಪ್ರೂ ಕಾಲರ್ ಮೂಲಕ ಚಾಟಿಂಗ್ ಮಾಡಲು ಪ್ರಯತ್ನಿಸುವ ವಂಚಕರ ವಿರುದ್ಧ ಎಚ್ಚರಿಕೆ ವಹಿಸುವಂತೆ ಸದೀಂಪ್ ಪಾಟೀಲ್ ಮನವಿ ಮಾಡಿದ್ದಾರೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link