ಬೆ.ಆಗ್ನೇಯ ವಿಭಾಗದ ಪೊಲೀಸರಿಂದ ಭರ್ಜರಿ ಬೇಟೆ..!

ಬೆಂಗಳೂರು

     ವಾಹನಕಳ್ಳರು ಮನೆಗಳ್ಳರು ಅಂತರಾಜ್ಯ ಕಳ್ಳರು ಗಾಂಜಾ ಮಾರಾಟಗಾರರು ಸೇರಿ 70 ಮಂದಿ ಆರೋಪಿಗಳನ್ನು ಬಂಧಿಸಿ 126 ಮಂದಿ ಪ್ರಕರಣಗಳನ್ನು ಪತ್ತೆಹಚ್ಚಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 1 ಕೋಟಿ 41 ಲಕ್ಷಕ್ಕೂ ಹೆಚ್ಚಿನ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳಿಂದ ಒಂದು ಕೆಜಿ, 133 ಗ್ರಾಂ ತೂಕದ ವಜ್ರ, ಚಿನ್ನಾಭರಣಗಳು, 3 ಕೆಜಿ ಬೆಳ್ಳಿ, 77 ಮೊಬೈಲ್‍ಗಳು, 18 ಲ್ಯಾಪ್‍ಟಾಪ್, 62 ಕೆಜಿ 500 ಗ್ರಾಂ ಗಾಂಜಾ, 18 ಎಸ್‍ಎಲ್‍ಡಿ ಪೇಪರ್, 22 ಕೆಜಿ ಕಾಪರ್ ಕೇಬಲ್, 73 ದ್ವಿಚಕ್ರ ವಾಹನಗಳು, 4 ಕಾರುಗಳು, 3 ಆಟೋಗಳು ಸೇರಿ, ಒಂದು ಕೋಟಿ, 41 ಲಕ್ಷಕ್ಕೂ ಹೆಚ್ಚಿನ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ತಿಳಿಸಿದ್ದಾರೆ

     ಕೋರಮಂಗಲ ಪೊಲೀಸರು ಬೊಮ್ಮನಹಳ್ಳಿಯ ಸೈಯ್ಯದ್ ಇಮ್ರಾನ್ ಅಲಿಯಾಸ್ ಕಾಲು (22), ಸಿದ್ದಾಪುರದ ವಾಸೀಂ ಅಕ್ರಂ ಅಲಿಯಾಸ್ ಬ್ಲೇಡ್ ವಸೀಂ (24)ನನ್ನು ಬಂಧಿಸಿ, 8 ಲಕ್ಷ ರೂ. ಮೌಲ್ಯದ 270 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

    ಇದಲ್ಲದೆ, ಆಡುಗೋಡಿಯ ದಯಾನಂದ್ (26), ಮದುಸೂಧನ್ (20)ನನ್ನು ಬಂಧಿಸಿ, 15 ಸಾವಿರ ರೂ. ಮೌಲ್ಯದ ಮೊಬೈಲ್‍ಗಳನ್ನು ವಶಪಡಿಸಿಕೊಂಡರೆ, ಅಶೋಕನಗರದ ಸಲ್ಮಾನ್ (23), ಆಡುಗೋಡಿಯ ಬಶೀರ್ (22), ಇಮ್ತಿಯಾಜ್ ಪಾಷ (21) ನನ್ನು ಬಂಧಿಸಿ, 47 ಲಕ್ಷದ 71 ಸಾವಿರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

       ಇದಲ್ಲದೆ, ಆಡುಗೋಡಿಯ ಮಹಮದ್ ವಾರಿಶ್ (20) ಎಂಬ ವಾಹನ ಕಳ್ಳನನ್ನು ಬಂಧಿಸಿ, ನಾಲ್ಕು ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಡಿವಾಳ ಪೆÇಲೀಸರು ವಿವೇಕನಗರದ ಸುಜಿತ್ ಅಲ್ವಿನ್ (19), ಕೋರಮಂಗಲದ ಪ್ರವೀಣ್ (19), ಪುಟ್ಟ (23)ನನ್ನು ಬಂಧಿಸಿ, 6 ಲಕ್ಷ 20 ಸಾವಿರ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

      ನಾಗವಾರದ ರವಿ (29) ಎಂಬ ಅಂತಾರಾಜ್ಯ ಕಳ್ಳನನ್ನು ಬಂಧಿಸಿ, 8 ಲಕ್ಷ ರೂ. ಮೌಲ್ಯದ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ. ಆವಲಹಳ್ಳಿಯ ಫಯಾಜ್ ಖಾನ್ (22), ಆಂಧ್ರಪ್ರದೇಶದ ಕುಪ್ಪಂನ ಸತೀಶ್ ಅಲಿಯಾಸ್ ಜಂಬು (23)ನನ್ನು ಬಂಧಿಸಿ, 14 ಕಳವು ಪ್ರಕರಣಗಳನ್ನು ಪತ್ತೆಹಚ್ಚಿ 14 ಲಕ್ಷ 50 ಸಾವಿರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

      ಒಟ್ಟಾರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೋರಮಂಗಲದಲ್ಲಿ – 32, ಮಡಿವಾಳದಲ್ಲಿ – 24, ಆಡುಗೋಡಿಯಲ್ಲಿ – 18, ಸುದ್ದಗುಂಟೆಪಾಳ್ಯದಲ್ಲಿ – 10, ಮೈಕೋ ಲೇಔಟ್‍ನಲ್ಲಿ – 7, ಬೊಮ್ಮನಹಳ್ಳಿ – 2, ಬೇಗೂರು – 6, ಎಲೆಕ್ಟ್ರಾನಿಕ್ ಸಿಟಿ – 9, ಪರಪ್ಪನ ಅಗ್ರಹಾರ – 4, ತಿಲಕ್ ನಗರ – 8, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ – 6 ಪ್ರಕರಣಗಳನ್ನು ಪತ್ತೆಹಚ್ಚಿ ರಾಜ್ಯ – ಅಂತಾರಾಜ್ಯದದ್ದಾರೆ ಎಂದು ತಿಳಿಸಿದರು.

     ಕಳೆದ ಎರಡು ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ಆಗ್ನೇಯ ವಿಭಾಗದ ಪೊಲೀಸರು 126 ಪ್ರಕರಣಗಳನ್ನು ಪತ್ತೆಹಚ್ಚಿರುವುದನ್ನು ಪ್ರಶಂಸಿಸಿದ ಭಾಸ್ಕರ್ ರಾವ್ ಅವರು ನಗದು ಬಹುಮಾನ ಘೋಷಿಸಿದರು. ಡಿಸಿಪಿ ಇಶಾಪಂಥ್ ಅವರಿದ್ದರು.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link