ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕಾರಣ: ಕಪಿಲ್ ಸಿಬಲ್

ನವದೆಹಲಿ:

   ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು “ಆರ್ಥಿಕತೆಯು ಐಸಿಯುನಲ್ಲಿದೆ” ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಮತ್ತು ಯಾರು ನಾಗರಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಕೆಲಸ ಮಾಡುತ್ತಾರೋ ಅವರ ವಿರುದ್ಧ ಮೋದಿ ಸರ್ಕಾರ “ಲುಕ್ ನೋಟಿಸ್” ನೀಡುತ್ತಿದೆ ಎಂದು ತಿಳಿಸಿದ್ದಾರೆ.

   ತಮ್ಮ ಸಹೋದ್ಯೋಗಿ ಮತ್ತು ಮಾಜಿ ಕೇಂದ್ರ ಸಚಿವರಾದ ಪಿ.ಚಿದಂಬರಂ ವಿಷಯವಾಗಿ ತನಿಖಾ ಸಂಸ್ಥೆಗಳು ಇಂತಹ ನೋಟಿಸ್ ನೀಡಿ ಆವರನ್ನು ಬಂಧಿಸಿವುದರ ವಿರುದ್ಧ ಕಿಡಿಕಾರಿದ್ದಾರಲ್ಲದೇ ಮೋದಿ ಸರ್ಕಾರ ತಮ್ಮ ವಿರುದ್ಧ ಯಾರು ಮಾತನಾಡಿದರು ಅವರ ಪರವಾಗಿ ಲುಕ್ ಔಟ್ ನೋಟಿಸ್ ನೀಡುವ  ಚಾಳಿ ಬೆಳೆಸಿಕೊಂಡಿದೆ ಎಂದಿದ್ದಾರೆ.

    ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ್ 26 ರವರೆಗೆ ಮಾಜಿ ಹಣಕಾಸು ಸಚಿವ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು .ದೇಶದಲ್ಲಿ ಅಸಹಿಷ್ಣುತೆ ಮತ್ತು ಅಸಹನೆ ಜಾಸ್ತಿಯಾಗುತ್ತಿದೆ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರನ್ನು ನಿರ್ದಾಕ್ಷಿಣ್ಯವಾಗಿ ಸುಳ್ಳು ಆರೋಪಗಳಡಿಯಲ್ಲಿ ಬಂಧಿಸುವುದನ್ನು ಕಾಂಗ್ರಸ್ ಖಡಿಸುತ್ತದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link