ಒಣಗಿದ ಐತಿಹಾಸಿಕ ನಿಡಗಲ್ಲಿನ ರಾಮತೀರ್ಥದ ಪುಷ್ಕರಿಣಿ..!

ಪಾವಗಡ
     ಎಂತಹ ಗೊಡ್ಡುಕಾಲ ಬಂದರೂ ನಿಡಗಲ್ಲಿನ ರಾಮತೀರ್ಥ ಒಣಗಿರಲಿಲ್ಲ. ಆದರೆ  ಈ ಶ್ರಾವಣ ಮಾಸದಲ್ಲಿ, ಅದರಲ್ಲೂ ಮಳೆಗಾಲದಲ್ಲಿ  ರಾಮತೀರ್ಥದ ಪುಷ್ಸರಿಣಿಯನನ್ನು ಕೊಳವೆ ಬಾವಿಯಿಂದ ಪಂಪ್‍ಮಾಡಿ ಪೈಪುಗಳ ಮೂಲಕ ನೀರು ತುಂಬಿಸುವಷ್ಠು ಬರ ನಿಡಗಲ್ಲಿಗೆ ಬಂದಿದೆ. ಹಾಗಾಗಿ ಇಲ್ಲಿಗೆ  ಬರುವ ಭಕ್ತರನ್ನು ಬರದ ಛಾಯೆ  ಕಾಡಬಾರದೆಂದು ಈ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಿಡಗಲ್ಲು ಅಭಿವೃದ್ಧಿ ಸಂಘದ ಅಧ್ಯಕ್ಷ ನ್ಯಾಯದಗುಂಟೆಯ ಎನ್.ಇ. ಈರಣ್ಣ ತಿಳಿಸಿದ್ದಾರೆ.
   
     ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ 50 ವರ್ಷಗಳಿಂದ ರಾಮತೀರ್ಥ ಒಣಗಿದ್ದು ಕಂಡಿರಲಿಲ್ಲ. ಈ ವರ್ಷ ಇದು ಒಣಗಿದ್ದು,  ಶ್ರಾವಣ ಮಾಸದ ಅಂತಿಮ ಸೋಮವಾರದಂದು  ನಿಡಗಲ್ಲು ದುರ್ಗದ  ಕುಂಬಿ ಬಸವಣ್ಣನ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸ್ನಾನ ಹಾಗೂ ಗಂಗೆ ಪೂಜೆಗೆ  ಬರದಿಂದ ನೀರಿನ ಕೊರತೆ ಕಾಡದಿರಲೆಂದು ಪೈಪುಗಳ ಮೂಲಕ ರಾಮತೀರ್ಥಕ್ಕೆ ನೀರನ್ನು ತುಂಬಿಸಲಾಗುತ್ತಿದೆ ಎಂದರು.
   
    ಇದಲ್ಲದೆ ರಸ್ತೆ ಮಣ್ಣು ಹಾಕಿಸಲಾಗುತ್ತಿದೆ. ಎಲ್ಲಾ ದೇವಾಲಯಗಳಿಗೆ ನೀರಿನ ಸಂಪರ್ಕ ಕೊಡಲಾಗಿದೆ. ನಿಡಗಲ್ಲು ನೋಡಲು ಹರ್ಷದಿಂದ ಬರುವ ಭಕ್ತರಿಗೆ ಯಾವುದೇ ಕೊರತೆ   ಆಗಬಾರದು ಎಂದು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಸೋಮವಾರ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ.  ಪ್ರತಿ ದೇವಾಲಯದಲ್ಲಿ ಪ್ರಸಾದ ವ್ಯವಸ್ಥೆಯನ್ನು ಭಕ್ತರೆ  ಏರ್ಪಡಿಸುತ್ತಾರೆ ಎಂದರು. 
   
     ಶ್ರಾವಣ ಮಾಸದ ಅಂತಿಮ ಸೋಮವಾರ ಪವಿತ್ರ ದಿನವಾಗಿದ್ದು, ಇಂದು ನಿಡಗಲ್ಲು ದುರ್ಗಕ್ಕೆ 20 ಸಾವಿರ   ಭಕ್ತರು  ಆಗಮಿಸುವ ನಿರೀಕ್ಷೆ ಇದೆ. ಬೆಟ್ಟದ ಬುಡದಲ್ಲಿ ಇರುವ ನಿಡಗಲ್ಲು ಗ್ರಾಮದಿಂದ ರಾಮತೀರ್ಥ ಹಾಗೂ ಬೆಟ್ಟದ ಮೇಲಿನ  ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೂ ವಾಹನ ಹೋಗಲು ರಸ್ತೆ ಇದ್ದು,  ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಸೋಮವಾರದಂದು ಬೆಳಗಿನಿಂದ ಸಂಜೆಯವರೆಗೂ ಭಕಾದಿಗಳು ಬಂದು ಹೋಗುವುದಕ್ಕೆ  ನಿಡಗಲ್ಲಿಗೆ ಸಾರಿಗೆ ಬಸ್‍ಗಳನ್ನು ಬಿಡುವಂತೆ ಅವರು ಮನವಿ ಮಾಡಿದ್ದಾರೆ.      
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link