ಶುಗರ್ ಫ್ಯಾಕ್ಟರಿ ಬಾರ್ ಅಂಡ್ ರೆಸ್ಟೊರೆಂಟ್ ಮೇಲೆ ಪೊಲೀಸ್ ದಾಳಿ.!

ಬೆಂಗಳೂರು

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ವಾತಿ ಅವರು ಲೀ ಮೆರಿಡಿಯನ್ ಹೋಟೆಲ್‍ನ ಕೆಳಮಹಡಿಯಲ್ಲಿ ನಡೆಸುತ್ತಿದ್ದ ಶುಗರ್ ಫ್ಯಾಕ್ಟರಿ, ಬಾರ್ ಅಂಡ್ ರೆಸ್ಟೊರೆಂಟ್ ಹಾಗೂ ಡಿಸ್ಕೋಥೆಕ್ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

   ಶುಗರ್ ಫ್ಯಾಕ್ಟರಿ ಬಾರ್‍ನ ಮ್ಯಾನೇಜರ್ ವಿದ್ಯಾರಣ್ಯಪುರದ ಮಂಜುನಾಥ್ ಅಲಿಯಾಸ್ ರೋಹನ್‍ಗೌಡ (37),ಡಿಜೆ ಶೇಷಾದ್ರಿಪುರಂನ ನವೀದ್ (29), ಕ್ಯಾಶಿಯರ್, ಮತ್ತಿಕೆರೆಯ ಶಶಿಕುಮಾರ್ (41) ಬಂಧಿತ ಆರೋಪಿಗಳಾಗಿದ್ದಾರೆ . ಬಂಧಿತರಿಂದ ಸೌಂಡ್ ಸಿಸ್ಟಂ, ಮ್ಯೂಸಿಕ್ ಕಂಟ್ರೋಲರ್,ಮದ್ಯದ ಬಾಟಲಿಗಳು,ಸ್ವೈಪಿಂಗ್ ಮಿಷನ್, 2,100 ರೂ. ನಗದನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಆರೋಪಿಗಳು ಲೀ ಮೆರಿಡಿಯನ್ ಮಾಲೀಕ ಮ್ಯಾಕ್‍ಚಾಲ್ರ್ಸ್ ಹಾಗೂ ಎಂಎಸ್ ರೆಡ್ಡಿ ಅವರ ಜತೆ ಸೇರಿ ಅಬಕಾರಿ ನಿಯಮಗಳು ಹಾಗೂ ಸಾರ್ವಜನಿಕ ಮನರಂಜನಾ ನಿಯಮಗಳನ್ನು ಉಲ್ಲಂಘಿಸಿ ಅವಧಿ ಮೀರಿ ಮದ್ಯ ಸರಬರಾಜು ಮಾಡಿ ಅಲ್ಲಿಯೇ ಮದ್ಯಪಾನಕ್ಕೆ ಅವಕಾಶ ನೀಡಿದ್ದರು. ಮುಂಜಾನೆ 3ರವರೆಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದರಲ್ಲಿ 300 ಮಂದಿ ಗ್ರಾಹಕರು ಭಾಗಿಯಾಗಿದ್ದರು.

     ಗ್ರಾಹಕರನ್ನು ಹೊರಗೆ ಕಳುಹಿಸಿ ಮೂವರನ್ನು ಬಂಧಿಸಿ, ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶುಗರ್ ಫ್ಯಾಕ್ಟರಿ ಬಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ವಾತಿ ಅವರು ನಡೆಸುತ್ತಿದ್ದರು ಎಂದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link