ಪಟ್ನಾ,
ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹೋಲಿಕೆ ಮಾಡುವ ಮೂಲಕ ಮಾಜಿ ಶಾಸಕ, ವಕ್ತಾರ ರಾಜೀವ್ ರಂಜನ್ ಲೇವಡಿ ಮಾಡಿದ್ದಾರೆ ಬಿಹಾರದಲ್ಲಿ ತೇಜಸ್ವಿ ಯಾದವ್ ಅವರಿಗೆ ರಾಹುಲ್ ಗಾಂಧಿ ಅವರಂತೆ ಸ್ಥಾನಮಾನ ನೀಡಲಾಗಿತ್ತು.
ಬಿಹಾರ ರಾಜಕೀಯದಲ್ಲಿ ತೇಜಸ್ವಿ ಆಗಮನದಿಂದ ಆರ್ ಜೆಡಿ ರಾಜಕೀಯದಲ್ಲಿ ಏನಾದರೂ ಬದಲಾವಣೆಯಾಗ ಬಹುದೆಂದು ಜನರು ಆಶಿಸಿದ್ದರು. ಆದರೆ ತೇಜಸ್ವಿ ಅವರು ಬಹಳ ಕಡಿಮೆ ಸಮಯದಲ್ಲಿಯೇ ಜನರ ನಿರೀಕ್ಷೆ, ಆಸೆಗಳಿಗೆ ತಣ್ಣೀರೆರಚಿದ್ದಾರೆ. ಈಗ ಅವರ ರಾಜಕೀಯವು ರಾಹುಲ್ ಗಾಂಧಿ ಅವರಂತೆಯೇ ಆಗುತ್ತಿದೆ ಎಂದರು.
ತಲೆಬುಡವಿಲ್ಲದ ಹೇಳಿಕೆಗಳನ್ನು ನೀಡುವುದರಲ್ಲಿ ರಾಹುಲ್ ಗಾಂಧಿ ನಿಸ್ಸೀಮರಾಗಿರುವಂತೆಯೇ ಯಾದವ್ ಸಹ ಗಾಳಿಯಲ್ಲಿ ಗುಂಡು ಹಾರಿಸುವ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ತೇಜಸ್ವಿ ಅವರ ಹೇಳಿಕೆಗಳು ಹಾಗೂ ರಾಜಕೀಯ ಮಾಡುವ ವಿಧಾನವನ್ನು ನೋಡಿದಾಗ ಅವರು ರಾಹುಲ್ ಗಾಂಧಿ ಅವರಿಂದ ನೇರವಾಗಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ತೋರುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








