ತುಮಕೂರು
ದಶಕದ ಹಿಂದೆ ಹೂಳು ತುಂಬಿಕೊಂಡು ಹಾಳಾಗಿದ್ದ ಅಮಾನಿಕೆರೆ ಅಭಿವೃದ್ಧಿಯು ಸ್ಮಾರ್ಟ್ ಸಿಟಿ ಯೋಜನೆಯಡಿ ಭರದಿಂದ ಸಾಗಿದ್ದು, ಮಂಗಳವಾರ ತಾಂತ್ರಿಕ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿತು.
ಭೇಟಿ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮಾತನಾಡಿ, ತುಮಕೂರಿನ ಹೆಮ್ಮೆ ಎಂದೇ ಬಿಂಬಿತವಾಗಿರುವ ಅಮಾನಿಕೆರೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಖಿSಅಐ) ಸುಮಾರು 35 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ವಾಕಿಂಗ್‍ಪಾತ್, ವಾರಾಂತ್ಯದ ಸಂಗೀತ ಕಾರಂಜಿ, ಕಲ್ಯಾಣಿ, ಮಕ್ಕಳ ಆಟಿಕೆ ಜಾಗ, ಗಾಜಿನಮನೆ, ಪುಟಾಣಿ ರೈಲು, ಕೆರೆಯಲ್ಲಿ ನೀರು ಭರ್ತಿಯಾದಾಗ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ಅಮಾನಿಕೆರೆ ಸುಮಾರು 504 ಎಕೆರೆ ಪ್ರದೇಶದಲ್ಲಿರುವ ಅತಿದೊಡ್ಡ ಕೆರೆ. ಈ ಕೆರೆಯಲ್ಲಿ ಅತಿಯಾಗಿ ಹೂಳು ತುಂಬಿದ್ದರಿಂದ ವಾಹನಗಳಿಂದ ಹೂಳೆತ್ತಲಾಗುತ್ತಿದೆ. ಕಳೆದು ಹೋದ ಅಮಾನಿಕೆರೆ ವೈಭವಕ್ಕೆ ಮತ್ತೆ ಹೊಸ ರೂಪತರಲು ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದು, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಯೋಜನಾ ನಿರ್ವಹಣ ಸಲಹೆದಾರ ಸಂಸ್ಧೆಯಾದ ಐ.ಪಿ.ಇ ಗ್ಲೋಬಲ್ ಲಿಮಿಟೆಡ್ ಹಾಗೂ ಸಹಭಾಗಿತ್ವ ಸಂಸ್ಥೆಯಾದ ಗ್ರಾಂಟ್ ಥಾನ್ರ್ಟನ್ ಎಲ್ ಎಲ್ ಪಿ ಇಂಡಿಯಾದವರು ಈ ಕೆರೆ ಅಭಿವೃದ್ಧಿಯ ಉಸ್ತುವಾರಿ ವಹಿಸಿಕೊಂಡಿದೆ.
ಕೆರೆಯ ಬಂಡ್ ಅಭಿವೃದ್ಧಿ, ಡಿಸಿಲ್ಟಿಂಗ್, ಬೋಟಿಂಗ್ ಕೊಳದ ಅಭಿವೃದ್ಧಿ, ಸೈಕಲ್ ಟ್ರ್ಯಾಕ್, ಫುಟ್ಪಾತ್ ಮತ್ತು ಮೋನೋ ರೈಲ್ , ಕಾರ್ ಪಾತ್‍ವೇ ಅಭಿವೃದ್ಧಿ, ಹೂಬಿಡುವ ಸಸಿ ನೆಡುವುದು, ಉದ್ಯಾನವನಕ್ಕೆ ಬಂದ ಪ್ರವಾಸಿಗರು ದೂರದಲ್ಲೇ ನಿಂತು ಪಕ್ಷಿಗಳ ಕಲರವ ಕೇಳಲು, ಪಕ್ಷಿಗಳಿಗೆ ಉತ್ತಮ ಆವಾಸಸ್ಥಾನಗಳನ್ನು ಕಲ್ಪಿಸಿ ಕೊqಲು 3 ಪ್ರತ್ಯೇಕ ದ್ವೀಪಗಳ ಅಭಿವೃದ್ಧಿ ಸೇರಿದಂತೆ ಸುಂದರ ಉದ್ಯಾನವನವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರ ಕೆರೆಯ ಸುತ್ತಲೂ ಸಿ ಸಿ ಟಿವಿ ಅಳವಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್, ಮುಖ್ಯ ಅಭಿಯಂತರ ಡಾ.ಶಾಂತರಾಜಣ್ಣ ಸೇರಿದಂತೆ ಇತರ ಅಧಿಕಾರಿಗಳ ತಂಡ ಸಮಗ್ರ ಪರಿಶೀಲನೆ ನಡೆಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ