ಸಿಎಂಗೆ ಸವಾಲೆಸೆದ ಸ್ಯಾಂಡಲ್ ವುಡ್ ನಟಿ.!

ಬೆಂಗಳೂರು:

      ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸ್ಯಾಂಡಲ್ ವುಡ್ ನ ಪ್ರಸಿದ್ಧ ನಟಿಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಸವಾಲು  ಹಾಕಿದ್ದಾರೆ.

     ಸೋನು ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ ಸಿಎಂ ಅವರಿಗೆ ನೀವು ದಂಡ ವಿಧಿಸುವ ಮೊದಲು ದಯವಿಟ್ಟು ಉತ್ತಮ ರಸ್ತೆಗಳನ್ನು ನೀಡಿದ್ದೀರಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಏಕೆಂದರೆ ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದುಪ್ಪಟ್ಟು ದಂಡ ವಿಧಿಸುವ ಮೂಲಕ ಅವರ ಜೀವನವನ್ನು ಹಾಳು ಮಾಡಬೇಡಿ” ಎಂದು ಕೇಳಿಕೊಂಡಿದ್ದಾರೆ.

   

ತಮ್ಮ ಟ್ವಿಟರ್ ನಲ್ಲಿ ಸವಾರನೊಬ್ಬ ಮಳೆಗಾಲದಲ್ಲಿ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿ ನೀವು ಪ್ರಕಟಿಸಿರುವ ನೂತನ ದಂಡದ  ವಿವರ ಇಂತಿದೆ ಕುಡಿದು ಚಾಲನೆ – 10,000 ರೂ., ಸಿಗ್ನಲ್ ಜಂಪ್ – 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ ಚಾಲನೆ – 5,000ರೂ ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ – 1,000 ರೂ ಎಂದು ವಿವರವಾಗಿ ಹೇಳಿದ್ದಾರೆ ಮತ್ತು ದಂಡ ವಿಧಿಸುವ ಮುನ್ನ ತಾವು ಯಾವ ರೀತಿಯ ರಸ್ತೆ ನೀಡಿದ್ದೀರಾ ಎಂಬುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ ಮತ್ತು ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link