ಹಾಫ್ ಹೆಲ್ಮೆಟ್ : ಪೊಲೀಸರ ತಪ್ಪಿಗೆ ದಂಡ ವಿಧಿಸುವುದು ಯಾರು..!

ಬೆಂಗಳೂರು

     ನಗರದಲ್ಲಿ ಸಂಚಾರ ದಟ್ಟಣೆ ನಿಭಾಯಿಸುವ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರನ್ನು ಪತ್ತೆಹಚ್ಚಿ ದಂಡ ವಿಧಿಸುವ ಬಿಳಿ ಅಂಗಿ ಧರಿಸಿದ ಸಂಚಾರ ಪೊಲೀಸರ ಬಳಿಯೇ ಒಳ್ಳೆಯ ಹೆಲ್ಮೆಟ್ ಇಲ್ಲ…!

     ಬೈಕ್ ಸವಾರರು ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಜಾರಿಯಿದ್ದರೂ ಬಹುತೇಕ ಪೊಲೀಸರು ಧರಿಸುವುದು ಹಾಪ್(ಅರ್ಧ)ಹೆಲ್ಮೆಟ್ ಇವರಿಗೆ ದಂಡ ವಿಧಿಸುವರ್ಯಾರು ಎನ್ನುವುದು ಮಾತ್ರ ಪ್ರಶ್ನೆಯಾಗಿದೆ ಉಳಿದಿದೆ.

    ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಯಂತೆ ನಗರದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲನೆಗೆ ಸಂಚಾರ ಪೊಲೀಸರು ಮುಂದಾಗಿ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಸಾವಿರಗಟ್ಟಳೆ ದಂಡ ವಿಧಿಸುತ್ತಿದ್ದಾರೆ.ಆದರೆ,ನಿಯಮ ಉಲ್ಲಂಘನೆಯ ಬುದ್ಧಿ ಮಾತು ಹೇಳುವ ಸಂಚಾರ ಪೊಲೀಸರ ಬಳಿಯೇ `ಐಎಸ್‍ಐ ಮಾರ್ಕ್’ಯುಳ್ಳ ಹೆಲ್ಮೆಟ್ ಇಲ್ಲದಂತಾಗಿದೆ.

    ಅರ್ಧ ಹೆಲ್ಮೆಟ್ ಧರಿಸುವುದರಿಂದ ಪ್ರಾಣಾಪಾಯ ಉಂಟಾಗಲಿದೆ ಎಂಬ ಸೂಚನೆಗಳಿದ್ದರೂ ಪೊಲೀಸ್ ಸಿಬ್ಬಂದಿ ಅರ್ಧ ಹೆಲ್ಮೆಟ್ ಧರಿಸುವ ಉದಾಹರಣೆಗಳು ಜೀವಂತವಾಗಿವೆ.ತಲೆ ಹಾಗೂ ಮುಖವನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಿಸುವ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಸಾರ್ವಜನಿಕರಿಗೆ ಮಾತ್ರವಲ್ಲ, ನಿಮಗೂ ಇದೆ ಎಂದು ದಂಡ ಕಟ್ಟಿದ ಸವಾರರು ಪ್ರಶ್ನೆ ಮಾಡುತ್ತಿದ್ದಾರೆ.

     ಪೆÇಲೀಸ್ ಇಲಾಖೆ ವತಿಯಿಂದ ಸಿಬ್ಬಂದಿ ಕೂಡ ಕರ್ನಾಟಕ ಪೊಲೀಸ್ ಲಾಂಛನ ಹೊಂದಿರುವ ಹೆಲ್ಮೆಟ್ ಖರೀದಿಸುತ್ತಾರೆ. ಸರ್ಕಾರದಿಂದ ಅನುಮತಿ ಪಡೆದ ಮಳಿಗೆಯಿಂದಲೇ ಆ ಹೆಲ್ಮೆಟ್ ಖರೀದಿ ಮಾಡಲಾಗುತ್ತದೆ.ಆದರೆ, ಅದು ಅರ್ಧ ಹೆಲ್ಮೆಟ್ ಆಗಿರುತ್ತದೆ. ಹೀಗಾಗಿ, ತಯಾರಕರೇ ಪೂರ್ಣ ಪ್ರಮಾಣದ ಹೆಲ್ಮೆಟ್ ತಯಾರಿಸಿ ಸಿಬ್ಬಂದಿಗೆ ಮಾರಾಟ ಮಾಡಬಹುದಿತ್ತು. ಆದರೆ ಈ ಕಾರ್ಯ ನಡೆಯಲಿಲ್ಲ. ಈ ಬಗ್ಗೆ ಇಲಾಖೆಯೂ ಗಂಭೀರವಾಗಿ ಚಿಂತಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ನುಡಿದರು.

ಕಡ್ಡಾಯ ಆದೇಶ

    1988ರ ಕೇಂದ್ರ ಮೋಟಾರು ವಾಹನ ಕಾಯಿದೆಯ 230ನೇ ನಿಯಮದ ಅನ್ವಯ ದ್ವಿಚಕ್ರ ವಾಹನ ಸವಾರರು ಪ್ರಯಾಣದ ವೇಳೆ ಕಡ್ಡಾಯವಾಗಿ ಐಎಸ್‍ಐ ಗುರುತಿನ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಬೇಕು. ಜತೆಗೆ ಸುಪ್ರೀಂ ಕೋರ್ಟ್ ಕೂಡ ಈ ಸಂಬಂಧ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಆದರೂ ನಿಯಮ ಮತ್ತು ಆದೇಶದ ಪಾಲನೆ ಮಾತ್ರ ಆಗುತ್ತಿಲ್ಲ.

     ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಪೊಲೀಸರು ಅರ್ಧ ಹೆಲ್ಮೆಟ್ ಧರಿಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸುವಂತೆ ಇತ್ತೀಚಿಗಷ್ಟೇನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಆದೇಶಿಸಿದ್ದಾರೆ. ಆದರೆ, ಈ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link