ಕಳಪೆ ಕಾಮಗಾರಿ : ವ್ಯರ್ಥವಾಗುತ್ತಿರುವ ಕುಡಿಯುವ ನೀರು

ಮಧುಗಿರಿ

     ಪುರಸಭೆ ವತಿಯಿಂದ ನಿರ್ಮಿಸಿರುವ ನೀರಿನ ಸಿಸ್ಟನ್ ಟ್ಯಾಂಕ್‍ನ ಪೈಪ್‍ಗಳು ಸಡಿಲಗೊಂಡು ಮನೆಗಳಿಗೆ ನೀರು ಹರಿಯುತ್ತಿದೆ ಎಂದು ವಾರ್ಡಿನ ನಾಗರಿಕರು ಅರೋಪಿಸಿದ್ದಾರೆ.

      ಪಟ್ಟಣದ 8 ನೆ ವಾರ್ಡಿನ ಬೆಂಕಿ ಪುರದಲ್ಲಿ ವಾರಕ್ಕೆ ಒಂದು ಬಾರಿ ನೀರು ಬಿಡುತ್ತಿದ್ದು, ಅಪಾರ ಪ್ರಮಾಣದ ನೀರು ಪೈಪ್‍ಗಳಿಂದ ಪೋಲಾಗುತ್ತಿದೆ. ಒಂದು ಸಿಸ್ಟನ್‍ನಿಂದ ಕೂಗಳತೆ ದೂರದಲ್ಲಿರುವ ಮತ್ತೊಂದು ಸಿಸ್ಟನ್‍ಗೆ ಜಿಐ ಪೈಪ್‍ಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಿದ್ದು ಕೊಳವೆ ಮಾರ್ಗದಲ್ಲಿ ಅಲ್ಲಲ್ಲಿ ನೀರು ಪೋಲಾಗುತ್ತಿದೆ ಎಂಬುದು ನಾಗರಿಕರ ಆರೋಪ.

       ಬಸ್ತಮ್ಮ ಮಾತನಾಡಿ, ಕಳೆದ ಒಂದೂವರೆ ತಿಂಗಳ ಹಿಂದೆ ಕಾಮಗಾರಿ ನಿರ್ಮಿಸಿದ್ದಾರೆ. ಆದರೆ ಟ್ಯಾಂಕ್‍ಗೆ ಅಳವಡಿಸಿರುವ ಪೈಪ್‍ಗಳಿಂದ ನೀರು ಪೋಲಾಗುತ್ತಾ, ರಸ್ತೆಯಿಂದ ಮನೆಯೊಳಗೆ ಹರಿಯುತ್ತಿರುವುದರಿಂದ ನೀರು ನಿಂತು ಸೊಳ್ಳೆಕಾಟ ಜಾಸ್ತಿಚಿiÀiÁಗಿದೆ. ಟ್ಯಾಂಕ್‍ನಲ್ಲಿ ನೀರು ಹಿಡಿಯಲು ನಲ್ಲಿಗಳೇ ಇಲ್ಲವಾಗಿದ್ದು ಬಹಳ ನೀರು ಪೋಲಾಗುತ್ತಿದೆ ಎಂದು ಆರೋಪಿಸಿದರು.

      ಮಾಜಿ ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ಪುರಸಭೆಯ ವತಿಯಿಂದ ನಿರ್ಮಿಸಿರುವ ಸಿಸ್ಟನ್ ಕಾಮಗಾರಿ ಕಳಪೆಯಿಂದ ಕೂಡಿದೆ. ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಪೈಪ್‍ಗಳಿಂದ ನೀರು ಅಲ್ಲಲ್ಲಿ ಸೋರುತ್ತಿದೆ. ಕನಿಷ್ಠ ಅರ್ಧ ಅಡಿಯಾದರೂ ಮಣ್ಣು ತೆಗೆದು ಭೂಮಿಯ ಒಳಗಡೆ ಪೈಪ್ ಅಳವಡಿಸುವ ಗೋಜಿಗೆ ಗುತ್ತಿಗೆದಾರರು ಹೋಗಿಲ್ಲ. ಈಗಿರುವ ಪೈಪ್‍ಗೂ ಕಾಂಕ್ರೀಟ್ ಹಾಕಿಲ್ಲ. ರಸ್ತೆಯ ಮೇಲ್ಭಾಗದಲ್ಲಿ ಪೈಪ್ ಇರುವುದರಿಂದ ಕೆಲವರು ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಹಲವು ಬಾರಿ ಸಂಬಂಧಪಟ್ಟವರಿಗೆ ಸಮಸ್ಯೆಯ ಬಗ್ಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಶಿವಮ್ಮ, ಸಣ್ಣಮ್ಮ, ಅಸುರ ಮತ್ತಿತರರು ಇದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link