ಬೆಂಗಳೂರು
ನಗರದ ಚಿತ್ರಕಲಾ ಪರಿಷತ್ನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವಿವಿಧ ಮಾದರಿಯ ದಸರಾ ಗೊಂಬೆಗಳ ಪ್ರದರ್ಶನಗಳನ್ನು ಈ ತಿಂಗಳ 13 ರಿಂದ 22ರವರಗೆ ನಡೆಯಲಿದೆ.
ದಸರಾ ಗೊಂಬೆಗಳ ಪ್ರದರ್ಶನದ ಜತೆಗೆ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಒಂದೇ ಸೂರಿನಡಿ ಎಲ್ಲ ಮಾದರಿಯ ಹಾಗೂ ವಿವಿಧ ಆಯಾಮದ ಗೊಂಬೆಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ದಸರಾ ಹಬ್ಬಕ್ಕೆ ಬೇಕಾಗುವ ಎಲ್ಲ ರೀತಿಯ ಸಾಮಗ್ರಿಗಳನ್ನುಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದು.ಅಲಂಕಾರಿಕ ವಸ್ತುಗಳ ಜತೆಗೆ ಮನೆ ಮಂದಿಗೆ ಬೇಕಾಗುವ ಬಟ್ಟೆಗಳು ಮತ್ತು ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ದೇಶದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಕಲಾವಿದರು, ಮಣ್ಣು, ಕಲ್ಲು, ಲೋಹ ಬಳಸಿ ತಯಾರಿಸಿರುವ ಗೊಂಬೆಗಳ ಪ್ರದರ್ಶನ ನಡೆಯಲಿದೆ.ವಿವಿಧ ಕರಕುಶಲಕಾರರು ತಯಾರಿಸಿದ ತರೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳೂ ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವ ವಸ್ತುಗಳ ಪ್ರದರ್ಶನ ನಡೆಯಲಿದೆ.ಪ್ರದರ್ಶನ ಸೆ. 13 ರಿಂದ 22ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆತನಕ ಹಮ್ಮಿಕೊಳ್ಳಲಾಗಿದ್ದು, ಕರಕುಶಲ ಕರ್ಮಿಗಳಿಗೆ ಮಾರುಕಟ್ಟೆ ತಲುಪಿಸುವುದು ಈ ಮೇಳದ ಉದ್ದೇಶವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








