450ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಊಬರ್​​​ ಸಂಸ್ಥೆ

ಬೆಂಗಳೂರು:

    ಊಬರ್​​ ಸಂಸ್ಥೆಯು ಸುಮಾರು 450ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಗೆದುಹಾಕಿದ್ದಾರೆ. 2018-19ರಲ್ಲಿ 5.2 ಮಿಲಿಯನ್​​ನಷ್ಟು ಆದಾಯ ಕಡಿಮೆಯಾಗಿದ್ದು, ಊಬರ್​​​ ಕಂಪನಿ ನಷ್ಟದಲ್ಲಿದೆ. ಹೀಗಾಗಿ ಇಂಜಿನಿಯರಿಂಗ್​​ ವಿಭಾಗದ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಊಬರ್​​ ಕಂಪನಿಯ ಮುಖ್ಯ ಕಾರ್ಯದರ್ಶಿ ದಾರಾ ಕೋಸ್ರೋಶಾ ತಿಳಿಸಿದ್ದಾರೆ.

   ಕಳೆದ ವರ್ಷ ಕಂಪನಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಒಂದಷ್ಟು ಜನರನ್ನು ಕೆಲಸದಿಂದ ತೆಗೆಯಬೇಕಾಯ್ತು. ಸದ್ಯ ನಮ್ಮಲ್ಲಿ 27,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ಧಾರೆ.

   ಇದೀಗ ಉಬರ್​​ ಸಂಸ್ಥೆ ಆದಾಯ ಹೆಚ್ಚಿಸಲು ಕಂಪನಿಯ ಕಾರ್ಯವೈಖರಿ ಬದಲಾಯಿಸಬೇಕಿದೆ ಎನ್ನುತ್ತಾರೆ ಕೋಸ್ರೋಶಾ.  2017-18ರಲ್ಲಿ ಕಂಪನಿ 26.4 ಕೋಟಿ ರೂ. ಲಾಭ ದಾಖಲಿಸಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.40 ಏರಿಕೆಯಾಗಿದೆ. ಉಬರ್‌ ಜಾಗತಿಕ ಮಟ್ಟದಲ್ಲಿ 2017-18ರಲ್ಲಿ ಅತ್ಯುತ್ತಮ ಮಟ್ಟದ ಆದಾಯ ಗಳಿಸಿರಲಿಲ್ಲ. ಕಂಪನಿಯ ಸಿಇಒ ಟ್ರೆವಿಸ್‌ ಕಾಲ್ನಿಕ್‌ ಕೂಡ 2017ರಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಉಬರ್‌ ಇಂಡಿಯಾದ ಸಾಧನೆ ಮಹತ್ವ ಪಡೆದಿದೆ ಎನ್ನಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link