ಅಕ್ರಮ ಗಣಿಗಾರಿಕೆಯಿಂದಾಗಿ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ..!

ಕೊರಟಗೆರೆ

    ಅಕ್ರಮ ಗಣಿಗಾರಿಕೆ ಮತ್ತು ಕ್ರಷರ್ ಹಾವಳಿ ಹೆಚ್ಚಾಗಿರುವ ಪರಿಣಾಮ ಅರಣ್ಯದಲ್ಲಿ ವಾಸ ಮಾಡುತ್ತಿದ್ದ ಕಾಡು ಪ್ರಾಣಿಗಳು ನಾಡಿಗೆ ಬಂದು ರೈತರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ ಎಂದು ಆರೋಪಿಸಿ ರೈತ ಮುಖಂಡರು ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

    ತಾಲ್ಲೂಕಿನ ಅರಣ್ಯ ಪ್ರದೇಶದ 20 ಕಡೆ ಕಲ್ಲು ಗಣಿಗಾರಿಕೆ ಮತ್ತು 10 ಕ್ಕೂ ಹೆಚ್ಚು ಕ್ರಷರ್ ನಡೆಯುತ್ತಿವೆ. ಬ್ಲಾಸ್ಟಿಂಗ್ ಶಬ್ದದಿಂದ ಭಯಭೀತಗೊಂಡು ಕರಡಿ ಮತ್ತು ಚಿರತೆಗಳು ರೈತರ ಜಮೀನಿಗೆ ಬರುತ್ತಿವೆ. ಪರಿಶೀಲನೆ ಮಾಡಬೇಕಾದ ಕಂದಾಯ ಮತ್ತು ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗೌರಗಾನಹಳ್ಳಿ ರೈತ ದಯಾನಂದ ಮಾತನಾಡಿ ಮಲಪಲಹಳ್ಳಿ, ಓಬಳದೇವರಹಳ್ಳಿ, ಗೌರಗಾನಹಳ್ಳಿ, ವಡ್ಡಗೆರೆ, ಚೀಲಗಾನಹಳ್ಳಿ ಗ್ರಾಮದ ರೈತರು ತಮ್ಮ ಜಮೀನಿಗೆ ತೆರಳಲು ಪರದಾಡುತ್ತೀದ್ದಾರೆ. ಹಗಲಿನಲ್ಲಿಯೇ ಒಂದು ಸಲ ಕರಡಿ ಮತ್ತೊಂದು ಸಲ ಚಿರತೆ ರೈತರ ಮೇಲೆ ದಾಳಿ ಮಾಡುತ್ತೀದೆ. ರೈತಾಪಿ ವರ್ಗ ಗ್ರಾಮ ಬೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

    ಸ್ನೇಹಜೀವಿ ನಾಗೇಶ್ ಮಾತನಾಡಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಂದಾಯ ಮತ್ತು ಅರಣ್ಯ ಇಲಾಖೆ ಯಾವ ಆಧಾರದ ಮೇಲೆ ಪರವಾನಗಿ ನೀಡಿದ್ದಾರೆ. ಪ್ರಾಣಿ ಸಂಕುಲ ಹೆಚ್ಚಾಗಿರುವ ಕಡೆಯಲ್ಲಿ ಗಣಿಗಾರಿಕೆ ಮತ್ತು ಕ್ರಷರ್ ಹಾವಳಿ ಹೆಚ್ಚಾಗಿ ಕಾಡಿನಲ್ಲಿನ ಪ್ರಾಣಿಗಳು ನಾಡಿಗೆ ಬರುತ್ತೀವೆ. ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಇದ್ದರೂ ಜಾಣ ಕುರುಡುತನ ಪ್ರದರ್ಶನ ಮಾಡುತ್ತೀದ್ದಾರೆ ಎಂದು ಆರೋಪಿಸಿದರು.

   ಗೌರಗಾನಹಳ್ಳಿ ಗ್ರಾಮ ಮಹಿಳೆ ಜಯಲಕ್ಷ್ಮಮ್ಮ ಮಾತನಾಡಿ ಕರಡಿ ಮತ್ತು ಚಿರತೆ ಹಾವಳಿಯಿಂದ ಕೂಲಿ ಕೆಲಸ ಮಾಡಲು ಆಗುತ್ತೀಲ್ಲ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತೀದ್ದಾರೆ. ರೈತರು ಜಮೀನಿನಲ್ಲಿ ನೀರು ಹಾಯಿಸಲು ಹೋಗುತ್ತೀಲ್ಲ. ಕಾಡಿನ ಪ್ರಾಣಿಗಳು ವಾಸಿಸುವ ಅರಣ್ಯವನ್ನು ಅಧಿಕಾರಿಗಳೇ ನಾಶ ಪಡೆಸಲು ಕೈಜೊಡಿಸಿದ್ದಾರೆ. ಇನ್ನೂ ನಮ್ಮನ್ನು ರಕ್ಷಣೆ ಮಾಡಲು ಯಾರು ಎಂಬ ಪ್ರಶ್ನೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ದಯಾನಂದ, ನಾಗೇಶ, ವೆಂಕಟಾರಾಜು, ಮೂರ್ತಣ್ಣ, ಸಣ್ಣಪ್ಪ, ನಾರಾಯಣಪ್ಪ, ಹನುಮಂತರಾಜು, ರಾಮಣ್ಣ, ಚಿಕ್ಕನರಸಪ್ಪ, ನಂಜಪ್ಪ, ಲೊಕೇಶ, ಜಯಲಕ್ಷ್ಮಮ್ಮ, ಗಂಗಮ್ಮ, ಗೌರಮ್ಮ, ಅಂಬುಜಮ್ಮ, ಜಯರಾಮಯ್ಯ, ಶ್ರೀನಿವಾಸ, ಗೋವಿಂದರಾಜು, ರಂಗರಾಜು, ನಟರಾಜು ಸೇರಿದಂತೆ ಇತರರು ಇದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link