ಬೆಂಗಳೂರು
ಮುಸ್ಲಿಮರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರು ಹಿಜಡಾಗಳು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಪುರಭವನದ ಸಭಾಂಗಣದಲ್ಲಿ ಶ್ರೀರಾಮ ಸೇನೆ ಆಯೋಜಿಸಿದ್ದ, ೩೭೦, ೩೫ಎ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಅನೇಕ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಆದರೆ, ಅವರಿಗೆ ಕ್ಷೇತ್ರಗಳಲ್ಲಿನ ಮುಸ್ಲಿಮರ ಮತ ಕೈತಪ್ಪುವ ಭೀತಿ ಇದೆ. ಅಲ್ಲದೆ, ಅವರೆಲ್ಲರೂ ಹಿಜಡಾಗಳು, ಹೀಗಾಗಿಯೇ ಬಿಜೆಪಿ ಸೇರಿಲ್ಲ. ಪಾಕಿಸ್ತಾನಕ್ಕೆ ಬೆಂಬಲಿಸುವವರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶ್ರೀರಾಮ ಸೇನೆ ಹಿಂದುತ್ವ ವೀರ ಸೈನಿಕರ ತಯಾರಿಕ ಸಂಸ್ಥೆ ಆಗಿದೆ ಪಾಕಿಸ್ತಾನ ಅಕ್ರಮಿತ ಪ್ರದೇಶವನ್ನು ಮುಂದಿನ ದಿನಗಳಲ್ಲಿ ನಾವು ವಶಕ್ಕೆ ಪಡೆಯಲಿದ್ದೇವೆ. ಇನ್ನೂ, ದೇಶದೆಲ್ಲೆಡೆ ಹಿಂದುತ್ವ, ರಾಷ್ಟ್ರೀಯತೆ ವಿಚಾರಧಾರೆಗಳನ್ನು ಹೆಚ್ಚಾಗಿ ಹರಡಿಸಬೇಕು ಎಂದು ಹೇಳಿದರು.ಹಿಂದುತ್ವ ವಿಚಾರ ಬಂದಾಗ ಇಡೀ ದೇಶ ಒಂದಾಗುತ್ತಿದೆ ಎಂದ ಅವರು, ಸ್ವಾತಂತ್ರ್ಯ ಸಂದರ್ಭದಲ್ಲಿ ಯಾರು ಸಹ ಪಾಕಿಸ್ತಾನ ಬೇರೆ ಆಗಬೇಕೆಂದು ಹೋರಾಟ ನಡೆಸಿಲ್ಲ. ಬದಲಾಗಿ, ಭಾರತವನ್ನು ರಕ್ಷಣೆ ಮಾಡಲು ಹೋರಾಟ ನಡೆಸಲಾಯಿತು ಎಂದು ತಿಳಿಸಿದರು.
ಬಾರ್ಕೂರು ಮಹಾ ಸಂಸ್ಥಾನ ಪೀಠದ ಡಾ. ವಿಶ್ವ ಸಂತೋಷ ಭಾರತಿ ಮಾತನಾಡಿ, ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಆರ್ಥಿಕ ಕುಸಿತ ಎನ್ನುವ ಆರೋಪ ಮಾಡಲಾಗುತ್ತಿದೆ. ಆದರೆ, ಭಾರತದಲ್ಲಿ ಲಕ್ಷ್ಮೀ ದೇವತೆ ಇದ್ದಾಳೆ. ಹಾಗಾಗಿ, ಯಾರು ಆತಂಕ ವ್ಯಕ್ತಪಡಿಸುವ ಅಗತ್ಯ ಇಲ್ಲ ಎಂದು ನುಡಿದರು.ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಜೈನ ಮಠದ ಜೈನ ಆಚಾರ್ಯ ದೇವೇಂದ್ರ ಸಾಗರ ಸುರೇಶ್ವರಾಜಿ, ಡಾ.ಪಾವಗಡ ಪ್ರಕಾಶ್ ರಾವ್, ರಾಮಸೇನಾ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀ, ಕಾಶ್ಮೀರಿ ಸಮಾಜದ ಅಧ್ಯಕ್ಷ ಆರ್.ಕೆ.ಮಟ್ಟು ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








