ಬೆಂಗಳೂರು:
ದಕ್ಷಿಣ ಭಾರತದಲ್ಲಿ ಕಿರಿಕ್ ಸುಂದರಿ ಎಂದೇ ಖ್ಯಾತರಾದ ರಷ್ಮಿಕಾ ಮಂದಣ್ಣ ಅವರು ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ತಮ್ಮ ತವರರಾದ ಕೂರ್ಗ್ ಅಭಿವೃದ್ಧಿ ಬಗ್ಗೆ ವಿಚಾರಿಸಿ ಟ್ವೀಟ್ ಮಾಡಿದ್ದಾರೆ.
ಕೊಡಗು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಗೆ ಅನುಕೂಲವಾಗುವಂತೆ ಸರ್ಕಾರದ ವತಿಯಿಂದ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಜನರ ಕೂಗಿಗೆ ರಷ್ಮಿಕಾ ಧನಿಯಾಗಿದ್ದಾರೆ. ಕೆಲ ತಿಂಗಳ ಹಿಂದೆ ಸೋಷಿಯಲ್ಮೀಡಿಯಾದಲ್ಲಿ ವಿಚಾರದ ಬಗ್ಗೆ ಧನಿಯತ್ತಿದ್ದ ಕೊಡಗಿನ ಕುವರಿ ಸರ್ಕಾರ ಅಥವಾ ಅಲ್ಲಿನ ಸಂಸದರು ಈ ವಿಷಯ ೆಲ್ಲಿಗೆ ಬಂದಿದೆ ಎಂಬುದರ ಮಾಹಿತಿ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.
Sir @mepratap or #KarnatakaGovernment this tweet is regarding the multi speciality hospital in Coorg. Can we get updates on it please? Would be glad if we get any information regarding the developments or the updates ?
— Rashmika Mandanna (@iamRashmika) September 17, 2019
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾಗಿರುವ ಕೊಡಗು ಪ್ರವಾಸಿಗರು ಹೆಚ್ಚಾಗಿ ಬರುವ ಜಾಗವಾಗಿದೆ. ಆದರೇ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಕಂಡಿದ್ದರೂ ಜಿಲ್ಲೆಯಲ್ಲಿ ಒಂದೇ ಒಂದು ಸುಸಜ್ಜಿತ ಆಸ್ಪತ್ರೆ ಇರಲಿಲ್ಲ. ಹೀಗಾಗಿ ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಾಗಿ ಹ್ಯಾಶ್ ಟ್ಯಾಗ್ ಹೋರಾಟ ಆರಂಭವಾಗಿತ್ತು. ಇದೀಗ ಸಿನಿಮಾ ನಟರು, ರಾಜಕಾರಣಿಗಳು,ಮಠಾಧೀಶರು ಎಲ್ಲರೂ ಸ್ಪಂದಿಸಿ ಅಸ್ಪತ್ರೆ ನಿರ್ಮಾಣವಾಗಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ್ದ ಪ್ರತಾಪ್ ಸಿಂಹ್ ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಯೊಂದಿಗೆ ಮಾತನಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ.ಆದರೇ ಇತ್ತೀಚಿಗೆ ಈ ವಿಚಾರ ಜನರಿಗೆ ಮರೆತು ಹೋದಂತಾಗಿತ್ತು. ಇದೀಗ ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮೂಲಕ ಆಸ್ಪತ್ರೆ ನಿರ್ಮಾಣದ ವಿಚಾರ ಎಲ್ಲಿಗೆ ಬಂತು ಎಂದು ಪ್ರತಾಪ್ ಸಿಂಹ್ ರನ್ನು ಪ್ರಶ್ನಿಸುವ ಮೂಲಕ ಈ ವಿಚಾರದಲ್ಲಿ ತಮಗಿರುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
