ಸೌದಿ ಅರೇಬಿಯಾ :
ಸೆಪ್ಟೆಂಬರ್ ಅಂತ್ಯದ ವೇಳೆಗೆ ಸೌದಿ ಅರಾಮ್ಕೊ ಉತ್ಪಾದನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಅಮೀನ್ ನಾಸರ್ ತಿಳಿಸಿದ್ದಾರೆ.
ಸೌದಿ ಅರಾಮ್ಕೊದ ಅಬ್ಕೈಕ್ ಮತ್ತು ಖುರೈಸ್ ಸ್ಥಾವರಗಳ ಮೇಲೆ ನಡೆದ ಡ್ರೋನ್ ದಾಳಿಯಿಂದ ಹಾನಿಗೀಡಾಗಿದ್ದ ಅವುಗಳನ್ನು ಉತ್ಪಾದನಾ ಸಾಮರ್ಥ್ಯವನ್ನು ತೀವ್ರವಾಗಿ ಹಾನಿ ಮಾಡಿದ್ದವು.ಈ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಸುಮಾರು 20% ರಷ್ಟು ಹೆಚ್ಚಾಗಿದ್ದವು.
“ಈ ದಾಳಿಗಳು ನಮ್ಮ ಕಂಪನಿ ಉತ್ಪಾದನೆಯ ಮೇಲೆ ಗರಿಷ್ಠ ಹಾನಿಯನ್ನುಂಟು ಮಾಡಲು ಉದ್ದೇಶಿಸಲಾಗಿತ್ತು” ಎಂದು ನಾಸರ್ ಜೆಡ್ಡಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. “ಎಂತಹ ಪ್ರತಿಕೂಲ ಪರಿಸ್ಥಿತಿಯನ್ನಾದರು ಎದುರಿಸಲು ನಾವು ಸಿದ್ದರಿದ್ದೆವು ಜಗತ್ತಿನ ಮುಂದೆ ಅರಾಮ್ಕೊವನ್ನು ಹಣಿಯುವ ಯತ್ನ ಇದಾಗಿದೆ ನಾವು ಪೂರೈಕೆ ಮಾಡುತ್ತಿರುವ ಇಂಧನ ಪೂರೈಕೆಯನ್ನು ಹಾಳುಮಾಡುವವರನ್ನು ಎದುರಿಸಲು ನಮ್ಮ ಕಂಪನಿ ಸದಾ ಸಿದ್ದವಾಗಿದೆ ಎಂದಿದ್ದಾರೆ.”
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








