ಕರಾಚಿ: 

ಪಾಕಿಸ್ತಾನ ಸರ್ಕಾರ ನಮ್ಮ ಬಳಿ ಕೆವಲ ಮೂರು ತಿಂಗಳಿಗೆ ಆಗುವಷ್ಟು ಮಾತ್ರ ಹಣವಿದೆ ಎಂದ ಸರ್ಕಾರಕ್ಕೆ ತನ್ನ ದೇಶದಲ್ಲಿ ಯಾರ ಬಳಿ ಎಷ್ಟು ದುಡ್ಡಿದೆ ಎಂದು ತಿಳಿಯಲು ಸಾಧ್ಯವೇ ಆಗಿಲ್ಲ ಯಾಕೆಂದರೆ ಪಾಕಿಸ್ತಾನದ ಸಾಮಾನ್ಯ ಆಟೋ ಡ್ರೈವರ್ ಖಾತೆಯಲ್ಲಿ ಸುಮಾರು 300 ಕೋಟಿ ಹಾಗೂ ಒಬ್ಬ ಬೀದಿ ವ್ಯಾಪಾರಿ ಸುಮಾರು 200 ಕೋಟಿ ರುಪಾಯಿ ವಹಿವಾಟು ನಡೆದಿರುವ ಪ್ರಕರಣವನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ .
ಪಾಕಿಸ್ತಾನದ ಬೀದಿ ವ್ಯಾಪಾರಿಯೊಬ್ಬರ ಖಾತೆಯಲ್ಲಿ 200 ಕೋಟಿ ರುಪಾಯಿ ಪತ್ತೆಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಕರಾಚಿಯಲ್ಲಿ ಆಟೋ ಡ್ರೈವರ್ ಆಗಿರುವ ಮೊಹಮ್ಮದ್ ರಶೀದ್ ಎಂಬಾತ ತನ್ನ ಖಾತೆಯಿಂದ 300 ಕೋಟಿ ರುಪಾಯಿ ವಹಿವಾಟು ನಡೆಸಿದ್ದು ಈ ಸಂಬಂಧ ಪಾಕ್ ನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ರಶೀದ್ ನನ್ನು ಕರೆಸಿ ವಿಚಾರಣೆ ನಡೆಸುತ್ತಿದೆ.
ವಿಚಾರಣೆ ಬಳಿಕ ಮಾತನಾಡಿದ ರಶೀದ್ ಮೊದಲಿಗೆ ಎಫ್ಐಎ ಅಧಿಕಾರಿಗಳು ನನಗೆ ಕರೆ ಮಾಡಿ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿರಲಿಲ್ಲ. ಇದೀಗ ಮತ್ತೆ ನನ್ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು. ಆಗಲೇ ನನಗೆ ಗೊತ್ತಾಗಿದ್ದು ನನ್ನ ಖಾತೆಯಲ್ಲಿ 300 ಕೋಟಿ ರುಪಾಯಿ ವಹಿವಾಟು ಆಗಿದೆ ಅಂತ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
