ಇಸ್ಲಾಮಾಬಾದ್:
ಭಾರತ ಪಾಕ್ ಗಡಿಯಲ್ಲಿ ಪಾಕಿಸ್ತಾನದ ಸೇನೆ ತನ್ನ ಬಲವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿರುವಾಗ ಭಾರತದ ವಿದೇಶಾಂಗ ಖಾತೆ ಸಚಿವರಾದ ಎಸ್ ಜೈಶಂಕರ್ ಹೇಳಿದ ಒಂದು ಹೇಳಿಕೆಗೆ ಇಡೀ ಪಾಕಿಸ್ತಾನ ಒಮ್ಮಲೆ ಬೆಚ್ಚಿಬಿದಿದೆ
ಪಾಕ್ ಆಕ್ರಮಿತ ಕಾಶ್ಮೀರ ಮುಂದೊಂದು ದಿನ ಭಾರತದ ಒಂದು ಭಾಗವಾಗಲಿದೆ ಎಂದಿದ್ದಕ್ಕೆ ಪಾಕಿಸ್ತಾನ ಕೆಂಡಾಮಂಡಲ ಗೊಂಡಿದ್ದು, ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಆಗ್ರಹಿಸಿದೆ.
ಭಾರತದ ಹೇಳಿಕೆಗೆ ಸಿಟ್ಟಿಗೆದ್ದಿರುವ ಪಾಕಿಸ್ತಾನ, ಇದೀಗ ಕೆಂಡ ಕಾರುತ್ತಿದೆ, ಭಾರತವು ಬೇವಾಬ್ದಾರಿ ಹಾಗೂ ಯುದ್ಧೋ ನ್ಮಾದ ಪ್ರದರ್ಶಿಸುತ್ತಿದೆ ಇಂತಹ ಹೇಳಿಕೆಗಳು ಕಾಶ್ಮೀರದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಾಶ್ಮೀರದಲ್ಲಿನ ಶಾಂತಿ ಹಾಗೂ ಸುರಕ್ಷತೆಯನ್ನು ಗಂಭೀರ ರೀತಿಯಲ್ಲಿ ಹಾಳು ಮಾಡುತ್ತದೆ.
ಪಿಒಕೆ ಕುರಿತಂತೆ ಹೇಳಿಕೆ ನೀಡಿದ್ದ ವಿದೇಶಾಂಗ ಸಚಿವ ಜೈಶಂಕರ್ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕುರಿತಂತೆ ಭಾರತ ಸ್ಪಷ್ಟ ನಿಲುವು ಹೊಂದಿದೆ. ಭವಿಷ್ಯದಲ್ಲಿ ಭಾರತ ಪಿಒಕೆ ಮೇಲೆ ನ್ಯಾಯಯುತವಾಗಿ ಹಕ್ಕು ಹೊಂದಲಿದೆ. ಪಿಒಕೆ ಎಂದಿಗೂ ನಮ್ಮ ದೇಶದ ಭಾಗ. ಅದನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.