ಹಿರಿಯೂರು :
ನಗರದ ಕೆ.ಎಸ್.ಆರ್.ಸಿ ಬಸ್ ನಿಲ್ದಾಣದ ಹಿಂಭಾಗ ಇರುವ ಬನ್ನಿ ಮಂಟಪದ ಬಳಿಯ ಒತ್ತುವರಿ ಜಾಗವನ್ನು ಒತ್ತುವರಿದಾರರಿಂದ ನಗರಸಭೆ ಆಯುಕ್ತ ಎಚ್.ಮಹಂತೇಶ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದ್ದಾರೆ.
ಈ ಜಾಗದಲ್ಲಿ ನಗರದ ಎಲ್ಲಾ ದೇವರುಗಳು ದಸರಾ ಹಬ್ಬದಲ್ಲಿ ಅಂಭಿನೋತ್ಸವ ನೆರವೇರಿಸಲಿದ್ದು ಈ ಅಂಬುಹೊಡೆಯುವಾಗ ಬನ್ನಿ ಮಂಟಪದ ಆವರಣದಲ್ಲಿ ನಗರದ ಎಲ್ಲ ದೇವತೆಗಳು ಹಾಗೂ ಅವುಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರುವುದರಿಂದ ಈ ಜಾಗದಲ್ಲಿ ಬಾರಿ ಕಿಷ್ಕಿಂದೆಯಾಗುತ್ತಿದ್ದು. ಇದರಿಂದ ಸಾರ್ವಜನಕರಿಗೆ ತೀವ್ರ ತೊಂದರೆ ಯಾಗುತ್ತಿತ್ತು. ಆದರೆ ಬನ್ನಿಮಂಟಪಕ್ಕೆ ಮೀಸಲಾದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು. ಭಕ್ತರು ಹಬ್ಬದ ಸಂದರ್ಭದಲ್ಲಿ ನಿಲ್ಲಲು ಕೊಡ ಸ್ಥಳಾವಕಾಶ ಇಲ್ಲದಂತಾಗಿ ತೊಂದರೆ ಅನುಭವಿಸಬೇಕಿತ್ತು. ಈ ಒತ್ತುವರಿ ತೆರವುಗೊಳಿಸುವಂತೆ ನಾಗರಿಕರು ಹಲವು ಬಾರಿ ನಗರಸಭೆಗೆ ಮನವಿ ನೀಡಿದ್ದರು.
ಆದ್ದರಿಂದ ನಗರಸಭೆ ಆಯುಕ್ತರು, ಒತ್ತುವರಿದಾರರನ್ನು ಕರೆಸಿ, ಒಂದು ವಾರದ ಗಡುವು ನೀಡಿ ಈ ಜಾಗದಿಂದ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಒತ್ತುವರಿದಾರರು ಸ್ಥಳಾಂತರ ಮಾಡಲು ನಿರಾಕರಿಸಿದ್ದರಿಂದ ಕೊನೆಗೆ ನಗರಸಭೆ ಸಿಬ್ಬಂದಿಯೊಂದಿಗೆ ಈ ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು. ನಗರಸಭೆ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪ್ರಾತ್ರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ