ಚಿತ್ರದುರ್ಗ 
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳವತಿಯಿಂದ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ ವಿಸರ್ಜನೆ ಪ್ರಯುಕ್ತ ಇಂದು ಬೃಹತ್ ಶೋಭಯಾತ್ರೆ ನಡೆಯಲಿದೆ. ಚಿತ್ರದುರ್ಗ ಮಾತ್ರವಲ್ಲದೆ ನಾಡಿನ ವಿವಿಧಡೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ರಾಜ್ಯ, ದೇಶದ ಗಮನವನ್ನೇ ಸೆಳೆದಿರುವ ಈ ಗಣಪತಿ ಶೋಭಯಾತ್ರೆ ಪೊಲಿಸರಿಗೆ ಮತ್ತು ಜಿಲ್ಲಾಡಳಿತಕ್ಕೆ ಸವಾಲು ಆಗಿದೆ. ನಗರದಲ್ಲಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಕಾನೂನು ಮತ್ತು ಸುವಸ್ಥೆ ಕಾಪಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ
ಈಗಾಗಲೇ ಮೂರು ವರ್ಷದಿಂದಲೂ ಗಣಪತಿ ಉತ್ಸವದ ಶೋಭಯಾತ್ರೆ ಶಾಂತಿಯುತವಾಗಿ ನಡೆಯುವಂತೆ ಆಗುವಲ್ಲಿ ಪೆÇೀಲಿಸ್ ಇಲಾಖೆ ಯಶಸ್ವಿಯಾಗಿದೆ. ಈ ಬಾರಿಯೂ ಶೋಭಯಾತ್ರೆ ಯಶಸ್ವಿಗೆ ಗಣಪತಿ ಸಮಿತಿ ಟೊಂಕಕಟ್ಟಿ ನಿಂತಿದ್ದರೆ, ಇತ್ತ ಪೆÇೀಲಿಸ್ ಇಲಾಖೆಯೂ ಶಾಂತಿಯುತ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ರೌಡಿಗಳು, ಪುಡಾರಿಗಳ ಪಟ್ಟಿ ತಯಾರಿಸಿರುವ ಖಾಕಿ ಗುಪ್ತ ದಳ ಅವರ ಚಲನವಲನದ ಮೇಲೆ ಕಣ್ಣಿಟ್ಟಿದೆ. ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಿಪಿಐ, ಪಿಎಸ್‍ಐ, ಪೋಲಿಸ್ ಸಿಬ್ಬಂದಿ ಹಾಗೂ ಗುಪ್ತದಳದ ಸಿಬ್ಬಂದಿ ಈಗಾಗಲೇ ದುರ್ಗಕ್ಕೆ ಆಗಮಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳು ಹಾಗೂ ನೆರೆ, ಹೊರ ಜಿಲ್ಲೆಗಳಿಂದ ಎಷ್ಟು ಮಂದಿ ಬರಲಿದ್ದಾರೆ ಎಂಬ ಲೆಕ್ಕ ಹಾಕಿದ್ದು, ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಇದೇ ದಿನ ಶೋಬಾಯಾತ್ರೆ ಇರುವುದರಿಂದ ಅಲ್ಲಿಂದ ದುರ್ಗಕ್ಕೆ ಬರುವ ಜನರ ಸಂಖ್ಯೆ ಕಡಿಮೆ ಆಗಲಿದೆ.
ಆದರೂ ಬೇರೆ ಜಿಲ್ಲೆ ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರತಿ ಹಳ್ಳಿಗಳಿಂದ ಜನ ಜಮಾಯಿಸುವ ಸಂಭವ ಹೆಚ್ಚಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಹೆಚ್ಚಿನ ಭದ್ರತೆಯನ್ನು ಚಿತ್ರುದುರ್ಗದಲ್ಲಿ ಕೈಗೊಳ್ಳಲಾಗಿದೆ. ಎರಡು ಸಾವಿರ ಪೊಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಚಿತ್ರದುರ್ಗದಲ್ಲಿ ಈಗಾಗಲೇ ಈ ಹಿಂದೆ ಕಾರ್ಯನಿರ್ವಹಿಸಿ ಬೇರೆಡೆ ಕಾರ್ಯನಿರ್ವಹಿಸುತ್ತಿರುವ ಎಸ್ಪಿ, ಡಿವೈಎಸ್ಪಿ, ಎಎಸ್ಪಿ ಸಿಪಿಐ, ಪಿಎಸ್ಸೈಗಳಣ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ಇವರಿಗೆ ಪ್ರತಿ ಬಡಾವಣೆ ಹಾಗೂ ಜನರ ಪರಿಚಯ ಇರುವುದರಿಂದ ಎಲ್ಲ ಸಿದ್ಧತೆ ಕೈಗೊಂಡಿದ್ದು, ಶಾಂತಿಯುತ ಗಣಪತಿ ಉತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರ ಚಲನವಲನ ಕುರಿತು ದೃಶ್ಯ ಚಿತ್ರೀಕರಿಸಿಕೊಳ್ಳಲು ವಿವಿಧೆಡೆ ಸಿಸಿ ಕ್ಯಾಮೆರಾ ಹಾಗೂ ಹ್ಯಾಂಡಿ ಕ್ಯಾಮೆರಾ ಬಳಸಲಾಗುತ್ತಿದೆ. ಪೋಲಿಸ್ ಸಿಬ್ಬಂದಿ ಎತ್ತರಸ್ಥಳದಲ್ಲಿ ನಿಂತು ಕ್ಯಾಮಾರದಲ್ಲಿ ಮೆರವಣಿಗೆ, ಜನರ ಚಲನವಲನ ಚಿತ್ರೀಕರಿಸಿಕೊಳ್ಳಲು ಸಿದ್ಧತೆ ಮಾಡಲಾಗಿದೆ.ಅಹಿತಕರ ಘಟನೆ ಜರುಗದಂತೆ ಪೊಲಿಸ್ ಇಲಾಖೆ ವತಿಯಿಂದಲೇ ಮೆರವಣಿಗೆ ಮೇಲೆ ಕಣ್ಣಿಡಲು ಡ್ರೋಣ್ ಬಳಕೆ ಮಾಡಲಾಗುತ್ತಿದೆ.
ಶೋಭಾಯಾತ್ರೆ ಭದ್ರತೆ ಪರಿಶೀಲನೆ
ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ, ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿ ಸೆ. 21 ರಂದು ನಡೆಯಲಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಬಿಗಿ ಭದ್ರತೆಯ ಬಗ್ಗೆ ಅಧಿಕಾರಿಗಳ ಸಭೆಯನ್ನು ನಡೆಸಿ ಗಣಪತಿ ತೆರಳುವ ಮಾರ್ಗವನ್ನು ಪರಿಶೀಲನೆ ನಡೆಸಿದರು.
ಹಿಂದೂ ಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮದ ಸಲುವಾಗಿ ನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ನಡೆಸಿದರು
ಸದರಿ ಸಭೆಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕರಾದ .ಅಮೃತ್ ಪೌಲ್, ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್.ಕೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹಾನಿಂಗ.ಬಿ.ನಂದಗಾಂವಿ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








