ಮೈಸೂರು :

ಯುವಕರು ವೃದ್ದರೊಬ್ಬರ ತಲೆಯನ್ನು ಕಡಿದು ಬಳಿಕ ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಜಿಲ್ಲೆಯ ಟಿ. ನರಸೀಪುರ ತಾಲೂಕು ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಂಪೇಗೌಡ (65) ಕೊಲೆಯಾದ ವೃದ್ಧ. ಕ್ಷುಲ್ಲಕ ಕಾರಣವಿಟ್ಟುಕೊಂಡು ಚೇತನ್ ಹಾಗೂ ಮಧು ಎಂಬ ಯುವಕರು ಕೆಂಪೇಗೌಡರು ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕರು ವೃದ್ಧನ ತಲೆಯನ್ನೇ ತುಂಡರಿಸಿದ್ದಾರೆ. ಅಲ್ಲದೇ ಬಳಿಕ ರುಂಡವನ್ನು ಹಿಡಿದುಕೊಂಡು ಬನ್ನೂರು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








