ಜಮಖಂಡಿಯ ಮುತ್ತೂರಿನಲ್ಲಿ ಪೇಜಾವರರು-ಜಪಾನಂದಜಿರವರಿಂದ ಪರಿಹಾರ ವಿತರಣೆ 

ಪಾವಗಡ
    ಇಲ್ಲಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮವು ಇನ್ಫೋಸಿಸ್ ಅಧ್ಯಕ್ಷೆಯಾದ ಸುಧಾಮೂರ್ತಿಯವರ ಕೊಡುಗೆಯಿಂದಾಗಿ, ಕಳೆದ ಆಗಸ್ಟ್ ತಿಂಗಳಿನಿಂದ ಪ್ರವಾಹ ಪರಿಸ್ಥಿತಿಯಿಂದ ನಲುಗಿ ಹೋಗಿದ್ದ ರಾಯಚೂರು ಜಿಲ್ಲೆ ಮತ್ತು  ಬಾಗಲಕೋಟೆ ಜಿಲ್ಲೆಯ ಕೆಲವು ಕುಗ್ರಾಮಗಳನ್ನು  
      ಆರಿಸಿಕೊಂಡು ಪರಿಹಾರ ಕಾರ್ಯವನ್ನು ನೀಡುತ್ತಾ ಬಂದಿದೆ. ಇದುವರೆಗೆ ಒಟ್ಟು 6 ಹಂತಗಳಲ್ಲಿ ಸುಮಾರು ಹತ್ತು ಸಾವಿರಕ್ಕೂ ಮಿಗಿಲಾದ ಕುಟುಂಬಗಳಿಗೆ ಪರಿಹಾರ ಕಾರ್ಯವನ್ನು ನೆರವೇರಿಸಲಾಗಿದೆ.  ಈವರೆವಿಗೆ ಸುಮಾರು 15000 ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗಿದೆ.
      ಈ ಯೋಜನೆಗೆ ಜಮಖಂಡಿಯ ಶಿಕ್ಷಣ ಇಲಾಖಾ  ಅಧಿಕಾರಿ ನಾರಾಯಣ ರಾಘವೇಂದ್ರ ಕುಲಕರ್ಣಿ ಮತ್ತು ತಂಡ, ಬಾಗಲಕೋಟೆಯ ಹಿರಿಯ ಪತ್ರಕರ್ತ ಆನಂದ್ ಮತ್ತು ರೆಡ್‍ಕ್ರಾಸ್ ತಂಡ, ರಾಯಚೂರಿನ  ವಕೀಲ  ಶಿವಾನಂದ ಪಾಟೀಲ್ ಮತ್ತು ಅವರ ತಂಡ,  ಜೊತೆಗೆ  ಸಮರ್ಪಣಾ, ಇನ್ಫೋಸಿಸ್ ಸಿ.ಎಸ್.ಆರ್. ಸ್ವಯಂಸೇವಕ ತಂಡ, ಶ್ರೀರಾಮಕೃಷ್ಣ ಸೇವಾಶ್ರಮದ ಮಹಿಳಾ ಭಕ್ತರು ಹಾಗೂ ಸ್ವಾಮಿ ವಿವೇಕಾನಂದ ಸ್ವಯಂಸೇವಾ ತಂಡ ಮತ್ತು ಬೆಂಗಳೂರಿನ ವಿವೇಕಹಂಸ ಯುವ ತಂಡಗಳು  ಸಹಕರಿಸಿವೆ.
      ಈ ಎಲ್ಲ ಕಾರ್ಯಕ್ರಮಗಳಿಗೆ ರೂವಾರಿಗಳಾಗಿ ವಾರಕ್ಕೆ ಮೂರು ದಿವಸ ಈ ನೆರೆಪೀಡಿತ ಪ್ರದೇಶಗಳಿಗೆ ನಿರಂತರವಾಗಿ ಭೇಟಿ ನೀಡುತ್ತಾ ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ನಡೆಸಿದ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಇಡೀ ಉತ್ತರ ಕರ್ನಾಟಕದ ಜನತೆ ಆಭಾರಿಯಾಗಿದ್ದಾರೆ ಎನ್ನಬಹುದು.  ಮಳೆ ಬಿಸಿಲು ಎನ್ನದೆ ಅಹರ್ನಿಷಿ ದುಡಿದ ಸ್ವಾಮಿ ವಿವೇಕಾನಂದರ ವಿಚಾರ ಧಾರೆಯನ್ನು ತನ್ನ ದಿನನಿತ್ಯ ಜೀವನದಲ್ಲಿ ಅನುಷ್ಠಾನ ರೂಪಕ್ಕೆ ತರುತ್ತಿರುವ ಪೂಜ್ಯರಿಗೆ ನಿಜಕ್ಕೂ ಎಷ್ಟು ಚಿರಋಣಿಯಾಗಿದ್ದರೂ ಸಾಲದು.  
       ಉಡುಪಿಯ ಪೇಜಾವರ ಮಠದ  ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ,  ಸ್ವಾಮಿ ಜಪಾನಂದಜೀ ರವರ ಈ ಸೇವಾ ಯಜ್ಞದಲ್ಲಿ ತಾವೂ ಸಹ ಭಾಗವಹಿಸಿ ಆಶೀರ್ವದಿಸಿದ್ದು  ಸ್ತುತ್ಯಾರ್ಹವಾಗಿದೆ.  ಶ್ರೀಗಳವರು ಇತ್ತೀಚೆಗೆ ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಆಶೀರ್ವದಿಸಿ ತಮ್ಮನ್ನು ಜಮಖಂಡಿಯ ಅತ್ಯಂತ ದಾರುಣವಾಗಿ ನೆರೆಯಿಂದ ಹಾನಿಗೊಳಗಾದ ಮುತ್ತೂರು ಗ್ರಾಮಕ್ಕೆ ಕರೆದೊಯ್ಯಬೇಕೆಂದರು.
 
     ಇಂದು (ಅ. 2 )ಮುತ್ತೂರಿಗೆ ಸ್ವತಃ ಶ್ರೀ ವಿಶ್ವೇಶ ತೀರ್ಥರು ಹಾಗೂ ಸ್ವಾಮಿ ಜಪಾನಂದಜೀ ರವರು ಭೇಟಿ ನೀಡಿ ಸುಮಾರು 1000ಕ್ಕೂ ಮಿಗಿಲಾದ ಕುಟುಂಬಗಳಿಗೆ ಪರಿಹಾರ ಸಾಮಗ್ರಿ ವಿತರಿಸರಿಸಲಿದ್ದಾರೆ.
ಪ್ರತಿ ಕುಟುಂಬಕ್ಕೆ   ಈವರೆಗೆ  
       ಟಾರ್‍ಪಾಲಿನ್, ಸೀರೆ, ಪೆಟ್ಟಿಕೋಟ್, ಕುಪ್ಪಸ ಪಂಚೆ, ಟವೆಲ್, ಬೆಡ್‍ಶೀಟ್, ಜಮಖಾನ, ಬಕೆಟ್ ಮತ್ತು ಮಗ್, ಟೂಥ್‍ಪೇಸ್ಟ್ ಮತ್ತು ಬ್ರಷ್, ಸೊಳ್ಳೆಬತ್ತಿ, ಬೆಂಕಿಪೊಟ್ಟಣ, ನೀರಿನ ಬಾಟಲ್, ಸ್ಟೀಲ್ ಪಾತ್ರೆಗಳು ವಿತರಿಸಿದೆ. ,ಕಂಬಳಿ (ಹೊದಿಕೆಗಳು) . ಟೀ ಪುಡಿ ಸಕ್ಕರೆ ,ಬೇಳೆ, 10 ಕೆ.ಜಿ. ಅಕ್ಕಿ ,ರವೆ ,ಮೇಣದಬತ್ತಿ, ಬ್ಲೀಚಿಂಗ್ ಪೌಡರ್, ಸ್ಯಾನಿಟರಿ ನ್ಯಾಪ್‍ಕಿನ್, ಮೈಸೋಪು,  ಡೆಟಾಲ್ ನೀಡಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link