ಮೈಸೂರು :
ಜಗತ್ಪ್ರಸಿದ್ದ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಯಾಯ ಜಿಲ್ಲೆಗಳ ಪರಂಪರೆ ಹಾಗೂ ವೈವಿಧ್ಯತೆಯನ್ನು ಅನಾವರಣಗೊಳಿಸುವ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಸಾಗಲಿವೆ.
ಅದರಲ್ಲಿ ತುಮಕೂರು ಜಿಲ್ಲೆಯಿಂದ ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರ(ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ) ಸ್ಥಬ್ಧಚಿತ್ರ ಅನಾವರಣಗೊಳ್ಳಲಿದೆ.
ಜಿಲ್ಲಾವಾರು ಸ್ತಬ್ಧಚಿತ್ರ ಪಟ್ಟಿ ಈ ರೀತಿಯಿದೆ :
ಬೆಳಗಾವಿ – ಅತೀವೃಷ್ಠಿ ಪ್ರವಾಹದಿಂದ ನಲುಗಿದ ಬೆಳಗಾವಿ,
ಬಾಗಲಕೋಟೆ – ಅತೀವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು,
ಧಾರವಾಡ – ಸಾಂಸ್ಕೃತಿಕ ವೈಭವ,
ಹಾವೇರಿ – ಶಂಖನಾದ ಮೊಳಗಿಸುತ್ತಿರುವ ಕನಕದಾಸರು,
ಗದಗ – ಭೇಟಿ ಪಡಾವೋ ಭೇಟಿ ಬಚಾವೋ,
ಉತ್ತರ ಕನ್ನಡ – ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ,
ಬೆಂಗಳೂರು ನಗರ – ಚಂದ್ರಯಾನ-2,
ಬೆಂಗಳೂರು ಗ್ರಾಮಾಂತರ – ಸ್ವಚ್ಛತೆ ಕಡೆಗೆ ನಮ್ಮ ನಡಿಗೆ,
ಚಿತ್ರದುರ್ಗ – ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು,
ದಾವಣಗೆರೆ – ಏರ್ ಸ್ಟ್ರೈಕ್,
ಕೋಲಾರ – ಅಂತರಗಂಗೆ,
ವಿಜಯಪುರ – ವಚನ ಪಿತಾಮಹ ಫ.ಹು ಹಳಕಟ್ಟಿ,
ಕೋಲಾರ – ಅಂತರಗಂಗೆ,
ಶಿವಮೊಗ್ಗ – ಫಿಟ್ ಇಂಡಿಯಾ,
ತುಮಕೂರು – ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು,
ರಾಮನಗರ – ಮಳೂರು ಅಂಬೆಗಾಲು ಕೃಷ್ಣ,
ಚಿಕ್ಕಬಳ್ಳಾಪುರ – ರೇಷ್ಮೆ ಮತ್ತು ಹೆಚ್. ನರಸಿಂಹಯ್ಯ
ಗುಲ್ಬರ್ಗಾ – ಆಯುಷ್ಮಾನ್ ಭಾರತ್
ಬಳ್ಳಾರಿ – ಹಂಪಿಯ ವಾಸ್ತು ಶಿಲ್ಪ ಕಲಾ ವೈಭವ
ಬೀದರ್ – ಫಸಲ್ ಭೀಮಾ ಯೋಜನೆ
ಕೊಪ್ಪಳ – ಗವಿಸಿದ್ದೇಶ್ವರ ಬೆಟ್ಟ
ರಾಯಚೂರು – ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾಯೋಜನೆ
ಯಾದಗಿರಿ – ಅಂಬಿಗರ ಚೌಡಯ್ಯ
ಮೈಸೂರು – ಚಾಮರಾಜ ಒಡೆಯರ್ ಅವರ 100 ನೇ ಜನ್ಮ ಶತಾಬ್ದಿ
ಚಾಮರಾಜನಗರ – ಸಮೃದ್ದ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ
ಚಿಕ್ಕಮಗಳೂರು – ಶಿಶಿಲಬೆಟ್ಟ
ದಕ್ಷಿಣ ಕನ್ನಡ – ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ
ಹಾಸನ – ಎತ್ತಿನಹೊಳೆ ಯೋಜನೆ
ಕೊಡಗು – ಗುಡ್ಡ ಕುಸಿತ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ
ಮಂಡ್ಯ – ಶ್ರೀ ಆದಿ ಚುಂಚನಗಿರಿ ಮಠ
ಉಡುಪಿ – ಕೃಷ್ಣ ಮಠದ ಗೋಪುರ ಸ್ತಬ್ದ ಚಿತ್ರ
ಮೈಸೂರಿನಿಂದ ಚಾಮರಾಜ ಒಡೆಯರ್ ಅವರ 100 ನೇ ಜನ್ಮ ಶತಾಬ್ದಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ