ಮತದಾರರ ಪಟ್ಟಿ ಪರಿಷ್ಕರಣೆ: ತುಮಕೂರು ನಗರಕ್ಕೆ ಹಿನ್ನಡೆ

ತುಮಕೂರು
    ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಚುನಾವಣಾ ಆಯೋಗವು “ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020“ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ತುಮಕೂರು ನಗರ ವಿಧಾನಸಭಾ ಕ್ಷೇತ್ರವು ಹಿನ್ನಡೆಯಲ್ಲಿದ್ದು, ಕೊನೆಯ ಸ್ಥಾನದಲ್ಲಿರುವುದು ಶುಕ್ರವಾರ ಲಭಿಸಿರುವ ಅಂಕಿ ಅಂಶಗಳಿಂದ ಕಂಡುಬಂದಿದೆ.
    ಈ ಕಾರ್ಯಕ್ರಮವು ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ 1 ರಿಂದಲೇ ಆರಂಭಗೊಂಡಿದ್ದು, ಇದೇ ಅಕ್ಟೋಬರ್ 15 ರಂದು ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆಗೆದುಹಾಕುವಿಕೆ, ತಿದ್ದುಪಡಿ, ಪರಿಶೀಲನೆ ಮತ್ತು ದೃಢೀಕರಣವನ್ನು ಮಾಡಿಕೊಳ್ಳಬೇಕಿದೆ. ಆದರೆ ಈ ಕಾರ್ಯಕ್ರಮ ಮುಕ್ತಾಯವಾಗುವ ದಿನಗಳು ಸಮೀಪಿಸುತ್ತಿದ್ದರೂ, ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಪ್ರಗತಿ ಈ ನಿಟ್ಟಿನಲ್ಲಿ ನಿರಾಶಾದಾಯಕವಾಗಿದೆ. ತುಮಕೂರು ನಗರ ವಿಧಾನ ಸಭೆ ಕ್ಷೇತ್ರದಲ್ಲಿ ಒಟ್ಟು 2,53,896 ಮತದಾರರಿದ್ದರೂ, ಈವರೆಗೆ ಪರಿಷ್ಕರಣೆಗೆ ಕೇವಲ 18,293 ಮತದಾರರಿಂದ ಮಾತ್ರ ಅರ್ಜಿಗಳು ಸ್ವೀಕೃತವಾಗಿವೆ. ಈ ಸಂಖ್ಯೆಯು ತುಮಕೂರು ನಗರ ಕ್ಷೇತ್ರವನ್ನು ಇಡೀ ಜಿಲ್ಲೆಯಲ್ಲಿ 11 ನೇ ಸ್ಥಾನಕ್ಕೆ ತಳ್ಳಿದೆ.
ಕ್ಷೇತ್ರವಾರು ವಿವರ
   ತುಮಕೂರು ಜಿಲ್ಲೆಯ 11 ವಿಧಾನ ಸಭೆ ಕ್ಷೇತ್ರಗಳ ಮತದಾರರ ಸಂಖ್ಯೆ ಹಾಗೂ ಪ್ರಸ್ತುತ ಈ ಕಾರ್ಯಕ್ರಮದ ಅವಧಿಯಲ್ಲಿ ಪರಿಷ್ಕರಣೆಗಾಗಿ ಕೋರಿಕೆ ಸ್ವೀಕರಿಸಿರುವ ಅಂಕಿ-ಅಂಶಗಳ ವಿವರ ಈ ಕೆಳಕಂಡಂತಿದೆ:-
 1) ಶಿರಾ ಕ್ಷೇತ್ರದಲ್ಲಿ  2,12,964 ಮತದಾರರಿದ್ದು, 64,373 ಮತದಾರರಿಂದ,
2)ಮ`Àುಗಿರಿ ಕ್ಷೇತ್ರದಲ್ಲಿ  1,93,889 ಮತದಾರರಿದ್ದು, 60,915 ಮತದಾರರಿಂದ,
3)ತಿಪಟೂರು ಕ್ಷೇತ್ರದಲ್ಲಿ  1,82,032 ಮತದಾರರಿದ್ದು, 50,438 ಮತದಾರರಿಂದ,
4)ಪಾವಗಡ ಕ್ಷೇತ್ರದಲ್ಲಿ  1,97,701 ಮತದಾರರಿದ್ದು, 44,118 ಮತದಾರರಿಂದ,
5)ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ  2,12,744 ಮತದಾರರಿದ್ದು, 39,817 ಮತದಾರರಿಂದ,
6)ಗುಬ್ಬಿ ಕ್ಷೇತ್ರದಲ್ಲಿ  1,82,500 ಮತದಾರರಿದ್ದು, 37,968 ಮತದಾರರಿಂದ,
7)ಕೊರಟಗೆರೆ ಕ್ಷೇತ್ರದಲ್ಲಿ  2,01,830 ಮತದಾರರಿದ್ದು, 37,139 ಮತದಾರರಿಂದ,
8)ತುರುವೇಕೆರೆ ಕ್ಷೇತ್ರದಲ್ಲಿ  1,79,803 ಮತದಾರರಿದ್ದು, 33,498 ಮತದಾರರಿಂದ,
9)ಕುಣಿಗಲ್ ಕ್ಷೇತ್ರದಲ್ಲಿ   1,90,913 ಮತದಾರರಿದ್ದು, 28,905 ಮತದಾರರಿಂದ,
10)ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ  2,01,725 ಮತದಾರರಿದ್ದು, 18,644 ಮತದಾರರಿಂದ,
11) ತುಮಕೂರು ನಗರ ಕ್ಷೇತ್ರದಲ್ಲಿ 2,53,896 ಮತದಾರರಿದ್ದು, 18,293 ಮತದಾರರು ಪರಿಷ್ಕರಣೆಗೆ ಕೋರಿದ್ದಾರೆ.
    ಈ ಅಂಕಿ ಅಂಶಗಳ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಒಟ್ಟು  22,09,997 ಮತದಾರರಿದ್ದು, ಈ ಪೈಕಿ 4,34,108 ಮತದಾರರು ಮಾತ್ರ ಪರಿಷ್ಕರಣೆಗೆ ಕೋರಿದ್ದಾರೆ. 
ಆಧಾರ್ ಲಿಂಕ್ ಸೂಕ್ತ
    ಪ್ರಸ್ತುತ “ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2020” ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಅವಕಾಶವಿದೆ. ಈ ದಿಸೆಯಲ್ಲಿ `Áರತೀಯ ಪಾಸ್‍ ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಪತ್ರ, ಪಡಿತರ ಚೀಟಿ, ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್,ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರ ದಾಖಲೆಗಳನ್ನು ಇದಕ್ಕಾಗಿ ಹಾಜರುಪಡಿಸಬೇಕು. ಇವುಗಳ ಪೈಕಿ ಆಧಾರ್ ಕಾರ್ಡ್‍ನ್ನು ಬಳಸುವುದೇ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.
ಇಲ್ಲಿ ಸಂಪರ್ಕಿಸಬಹುದು
ಮತದಾರರು ತಮ್ಮ ಹತ್ತಿರದ
1) ಸಾಮಾನ್ಯ ಸೇವಾ ಕೇಂದ್ರ,
2)ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ,
3)ಬೆಂಗಳೂರು ಒನ್/ಕರ್ನಾಟಕ ಒನ್,
4)ಅಟಲ್ ಜನಸ್ನೇಹಿ ಕೇಂದ್ರ, 5)ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯತ್),
6)ಮತಗಟ್ಟೆ ಅಧಿಕಾರಿ ಇಲ್ಲಿ ಸಂಪರ್ಕಿಸಬೇಕು. 
ಇದಲ್ಲದೆ ಸ್ಮಾರ್ಟ್ ಫೋನ್‍ನಲ್ಲಿ ವೋಟರ್ ಹೆಲ್ಪ್‍ಲೈನ್ ಎಂಬ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಅದರ ಮೂಲಕವೂ ಪರಿಷ್ಕರಣೆ ಮಾಡಿಕೊಳ್ಳಬಹುದು. ವೆಬ್‍ಸೈಟ್‍ನಲ್ಲಿ  ಪರಿಶೀಲಿಸಬಹುದು. ಮತದಾರರ ಸಹಾಯವಾಣಿ ಸಂಖ್ಯೆ 1950 ಇದನ್ನು ಬಳಸಿಕೊಳ್ಳಬಹುದು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.
ಆಯುಕ್ತರಿಂದ ತಾಕೀತು
      ತುಮಕೂರು ನಗರ ವಿಧಾನಸಭಾ ಕ್ಷೇತ್ರವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಅತಿ ಕೊನೆಯ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ  ತುಮಕೂರು ಮಹಾನಗರ ಪಾಲಿಕೆಯ “ಪ್ರಭಾರ ಆಯುಕ್ತ” ರಾಗಿರುವ ತುಮಕೂರು ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್ ಅವರು ಶುಕ್ರವಾರ ಪಾಲಿಕೆಯ ಕಚೇರಿಯಲ್ಲಿ ಪಾಲಿಕೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಶತಾಯಗತಾಯ ಪರಿಷ್ಕರಣೆ ಕಾರ್ಯವನ್ನು ಚುರುಕುಗೊಳಿಸಬೇಕೆಂದು ತಾಕೀತು ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link