ಕೂಡ್ಲಿಗಿ:
ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ಮಧ್ಯೆ ರಾತ್ರಿ ಟಾಟಾ ಏಸ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಲ್ಲಿ ಟಾಟಾ ಏಸ್ ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.
ಕ್ಯಾಸನಕೆರೆ ಗ್ರಾಮದ ಟಾಟಾ ಏಸ್ ಚಾಲಕ ಪ್ರಕಾಶ(35), ಮಾಲೀಕ ಮಡಕಿ ನಾಗಪ್ಪ(55)ಹಾಗೂ ನಾಗಮ್ಮ(26) ಮೃತರು. ಗುರು ಗಾಯಗೊಂಡಿದ್ದಾನೆ.ಮೃತರು ಗುರುವಾರ ಸಂಜೆ ಕ್ಯಾಸನಕೆರೆ ಗ್ರಾಮದಿಂದ ತರಕಾರಿ ತುಂಬಿಕೊಂಡು ಹೋಗಿ ಹೋಸಪೇಟೆ ಮಾರಕಟ್ಟಗೆ ಹಾಕಿ ವಾಪಸ್ಸು ಬರುವಾಗ ಶಿವಪುರ ಬಳಿ ಬೆಂಗಳೂರಿನಿಂದ ಯಲಬುರ್ಗಾಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸು ಹಾಗೂ ಟಾಟಾ ಏಸ್ ಮುಖಾ ಮುಖಿ ಡಿಕ್ಕಿಯಾಗಿವೆ. ಇದರಿಂದ ಪ್ರಕಾಶ್, ಮಡಕಿ ಚನ್ನಪ್ಪ ಹಾಗೂ ನಾಗಮ್ಮ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಗುರು ಎನ್ನುವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
