ತುಮಕೂರು :
ನನ್ನ ಮೇಲೆ ಐಟಿ ದಾಳಿ ಆದರೆ ಅದಕ್ಕೆ ದೇವೇಗೌಡರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ನನ್ನ ಮೇಲೆ ರೈಡ್ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಐಟಿ ದಾಳಿಯಾಗುತ್ತೆ. ಒಂದು ವೇಳೆ ದಾಳಿ ನಡೆಸಿದ್ದೇ ಆದರೇ ಅದಕ್ಕೆ ಹೆಚ್ ಡಿ ದೇವೇಗೌಡರೇ ನೇರ ಕಾರಣ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ನಾನು ದಾಳಿಗೆ ಹೆದರುವುದಿಲ್ಲ. ನನ್ನ ಮೇಲೆ ಐಟಿ ದಾಳಿಯಾದಲ್ಲಿ ನಾನೂ ಪತ್ರ ಬರೆಯುತ್ತೇನೆ. ದೇವೇಗೌಡರ ಆಸ್ತಿಯನ್ನು ತನಿಖೆ ಮಾಡಲು ನಾನು ಒತ್ತಾಯಿಸುತ್ತೇನೆ. ಅವರ ಕುಟುಂಬದ ಎಲ್ಲವನ್ನೂ ತನಿಖೆ ಮಾಡುವಂತೆ ನಾನೂ ಪತ್ರ ಬರೆಯುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
