ಶ್ರೀನಗರ:
370ನೆ ವಿಧಿ ರದ್ದತ್ತಿ ಆದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದ ಕಾಶ್ಮೀರ ಸರ್ಕಾರ ಕಾಶ್ಮೀರ ಜನತೆಗೆ ಸಂತೋಷದ ಸುದ್ದಿ ನೀಡಿದೆ.
ಪೋಸ್ಟ್‌ಪೇಯ್ಡ್ ಮೊಬೈಲ್ ಸಂಪರ್ಕ ಹೊಂದಿರುವವರಿಗೆ ಸೋಮವಾರದಿಂದ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಕಾಶ್ಮೀರ ಸರ್ಕಾರ ತಿಳಿಸಿದೆ ಇದರಿಂದಾಗಿ ಕೆಲ ತಿಂಗಳುಗಳಿಂದ ಸಂವಹನ ಇಲ್ಲದೇ ಬಂಧಿಗಳಂತೆ ಇದ್ದ ಜನತೆಗೆ ಈಗ ಅಲ್ಪ ಮಟ್ಟದ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ.
“ಮೊಬೈಲ್ ಫೋನ್ ಸಂಪರ್ಕಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ ಮತ್ತು ಇನ್ನು ವಿಸ್ತಾರವಾಗಿ ಹೇಳುವುದಾದರೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸೇವಾ ಪೂರೈಕೆದಾರರ ಎಲ್ಲಾ ಪೋಸ್ಟ್‌ಪೇಯ್ಡ್ ಮೊಬೈಲ್ ಸಂಪರ್ಕಗಳು ಅಕ್ಟೋಬರ್ 14 ರ ಮಧ್ಯಾಹ್ನದಿಂದ ಪುನರಾರಂಭಗೊಳ್ಳುತ್ತವೆ ಎಂದು ರೋಹಿತ್ ಕನ್ಸಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
