50,000 ರೂ. ಮೌಲ್ಯದ ಅಕ್ರಮ ಮದ್ಯ ವಶ

ಶಿರಾ

    ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿಗಳಲ್ಲಿ ಜಪ್ತಿ ಮಾಡಿ ಮುಟ್ಟುಗೋಲು ಹಾಕಿಕೊಂಡಿರುವ ಮದ್ಯಪಾನದ ಟೆಟ್ರಾ ಪಾಕೆಟ್ ಹಾಗೂ ಪೌಚ್‍ಗಳನ್ನು ಪಟ್ಟಣದ ಕೆ.ಎಸ್.ಬಿ.ಸಿ.ಎಲ್ ಡಿಪೋ ಆವರಣದಲ್ಲಿ ಮಂಗಳವಾರ ನಾಶ ಪಡಿಸಲಾಯಿತು.

    ಸಿರಾ ಕೆ.ಎಸ್.ಬಿ.ಸಿ.ಎಲ್ ಡಿಪೋ ಆವರಣದಲ್ಲಿ ಮಧುಗಿರಿ ಉಪ ಅಧೀಕ್ಷಕ ಸುಭಾಶ್‍ಚಂದ್ರ ನೇತೃತ್ವದೊಂದಿಗೆ ಗ್ರೇಡ್-2 ತಹಸೀಲ್ದಾರ್ ಕಮಲಮ್ಮ, ಕೆ.ಎಸ್.ಬಿ.ಸಿ.ಎಲ್ ವ್ಯವಸ್ಥಾಪಕ ರೆಡ್ಯಾನಾಯ್ಕ, ವಲಯ ಕಚೆÉೀರಿಯ ಅಬಕಾರಿ ನಿರೀಕ್ಷಕ ರವೀಂದ್ರ ಡಿ.ಜಿ, ಕೆ.ಎಸ್.ಬಿ.ಸಿ.ಎಲ್ ನಿರೀಕ್ಷಕಿ ಸುಧಾ ಎಸ್ ಕರೇಗೌಡರ್ ಸಮಕ್ಷಮದಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ 113.220ಲೀಟರ್ ಮದ್ಯ, 5.150 ಲೀಟರ್ ಬಿಯರ್, 43.280 ಲೀಟರ್ ಸೇಂದಿಯನ್ನು ನಾಶಪಡಿಸಲಾಗಿದೆ.

    2019-20ನೇ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಣೆ ಮತ್ತು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಮದ್ಯವನ್ನು ಮಂಗಳವಾರ ಬೆಳಗ್ಗೆ ಕೆ.ಎಸ್.ಬಿ.ಸಿ.ಎಲ್ ಆವರಣದಲ್ಲಿ ನಾಶಪಡಿಸಲಾಗಿದೆ. ಸದರಿ ಸ್ಥಳದ ಆವರಣದಲ್ಲಿ ಗುಂಡಿ ತೋಡಿ ಅದರಲ್ಲಿ ಮದ್ಯದ ಟೆಟ್ರಾ ಪ್ಯಾಕ್ ಹಾಗೂ ಸಾಚೇಟ್‍ಗಳನ್ನು ಹರಿದು ಮದ್ಯವನ್ನು ಸುರಿದು ಅಬಕಾರಿ ಇಲಾಖೆಯವರು ನಾಶಪಡಿಸಿದ್ದಾರೆ. ಈ ಸಮಯದಲ್ಲಿ ಅಬಕಾರಿ ಇಲಾಖೆಯ ರಕ್ಷಕರುಗಳಾದ ಎ.ಈ.ರವಿಶಂಕರ್‍ರಾವ್, ಟಿ.ಜನಾರ್ಧನಪೂಜಾರಿ, ವಿಜಯಲಕ್ಷ್ಮೀ, ಬಸವರಾಜು ಕೆ.ಎಸ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link