ಬೆಂಗಳೂರು
ಕರ್ನಾಟಕದಲ್ಲಿ ಶಾಸನಬದ್ಧ ಲಾಟರಿಯನ್ನು ಪುನರ್ ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.
ಕರ್ನಾಟಕ ರಾಜ್ಯದಲ್ಲಿ ಪುನಃ ಲಾಟರಿ ಮಾರಾಟ ಪ್ರಾರಂಭಗೊಂಡರೆ ಸರ್ಕಾರಕ್ಕೆ ಪ್ರತಿ ವರ್ಷ ೧೦ ಸಾವಿರ ಕೋಟಿ ರೂ ಆದಾಯ ಬರುತ್ತದೆ. ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿರುವ ಕಾನೂನು ಬಾಹಿರ ಹಾಗೂ ಅಕ್ರಮ ಲಾಟರಿ ದಂಧೆಗೆ ಕಡಿವಾಣ ಹಾಕಲು ಲಾಟಿಯನ್ನು ಪುನರ್ ಪ್ರಾರಂಭಿಸಬೇಕು ಎಂದು ಸಂಘದ ರಾಜ್ಯಧ್ಯಕ್ಷ ಸಿ.ರಾಮಕೃಷ್ಣ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಲಾಟರಿ, ಕ್ರಿಕೆಟ್ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಸಟ್ಟಾ ಮತ್ತು ಮಟ್ಕಾ, ರೈಟಿಂಗ್ ಸೇರಿದಂತೆ ಹಲವಾರು ದಂಧೆಗಳಿಂದ ೨ ಲಕ್ಷದ ೫೬,೦೦೦ ಕೋಟಿ ಸೋರಿಕೆಯಾಗುತ್ತದೆ.ಇದನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯದ ಉದ್ದಗಲ್ಲಕ್ಕೂ ಸುಮಾರು ೮ ರಿಂದ ೧೦ ಲಕ್ಷ ಲಾಟರಿ ಏಜೆಂಟರುಗಳಿದ್ದು ಇದರಲ್ಲಿ ಸುಮಾರು ೧೮,೦೦೦ ವಿಕಲಚೇತನರಿದ್ದಾರೆ. ಇವರೊಂದಿಗೆ ನಿರುದ್ಯೋಗಿ ಯುವಕರು, ವಯೋವೃದ್ಧರು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಸರ್ಕಾರ ಲಾಟರಿ ಮಾರಾಟವನ್ನು ರದ್ದುಗೊಳಿಸಿದ್ದರಿಂದ ಇವರೆಲ್ಲ ಬೀದಿ ಪಾಲಾಗಿದ್ದಾರೆ ಎಂದರು
ರಾಜ್ಯದಲ್ಲಿ ಲಾಟರಿ ಮಾರಾಟಕ್ಕೆ ಅನುಮತಿ ನೀಡುವುದರಿಂದ ನಿರುದ್ಯೋಗ ನಿವಾರಣೆಯಾಗುವುದಲ್ಲದೇ ರಾಜ್ಯದ ಬೊಕ್ಕಸಕ್ಕೆ ೧೦,೦೦೦ ಕೋಟಿಗೂ ಹೆಚ್ಚು ಆದಾಯ ಬರುವುದರಿಂದ ನೆರೆ ಸಂತ್ರಸ್ತರಿಗೆ ನೆರವು ನೀಡಲು ಸಾಧ್ಯವಾಗುತ್ತದೆ. ಸರ್ಕಾರದ ಇನ್ನಿತರ ಜನಪಯೋಗಿ ಯೋಜನೆಗಳಿಗೆ ಈ ಹಣ ಸಹಕಾರಿಯಾಗಲಿದೆ. ಹಾಗಾಗಿ ಕೇರಳ ಸೇರಿದಂತೆ ೧೦ ರಾಜ್ಯಗಳಲ್ಲಿ ಲಾಟರಿ ಮಾರಾಟಕ್ಕೆ ಅವಕಾಶ ವಿರುವುದರಿಂದ ನಮ್ಮ ರಾಜ್ಯದಲ್ಲಿಯೂ ಲಾಟರಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ಡಾ.ಅಶ್ವತ್ಥ್‌ನಾರಾಯಣ್, ಮೈಕಲ್ ರಾಜು, ಪದ್ಮೋಜಿರಾವ್, ಶ್ರೀನಿವಾಸ್, ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








