ಸಾಹಿತ್ಯ ಸಂಘಟನೆಗಳ ಕಾರ್ಯ ಶ್ಲಾಘನೀಯ : ಡಾ. ಲಕ್ಷ್ಮಣ್ ದಾಸ್

ತುಮಕೂರು
    ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳನ್ನು ಹುಟ್ಟು ಹಾಕಿ ಕಾರ್ಯಕ್ರಮ ಆಯೋಜಿಸುವುದು ಇವತ್ತಿನ ದಿನಗಳಲ್ಲಿ ಸುಲಭದ ಕೆಲಸವಲ್ಲ, ಆದರೂ ಆಸಕ್ತರು ಅಂತಹ ಸಂಸ್ಥೆಗಳನ್ನು ಕಟ್ಟಿ ನಾಡು, ನುಡಿಯ ಪ್ರೇಮ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ ದಾಸ್ ಹೇಳಿದರು.
    ನಗರದ ಕನ್ನಡ ಭವನದಲ್ಲಿ ಭಾನುವಾರ ಸಂಜೆ ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಸಿ ಮಾತನಾಡಿದ ಅವರು, ಈ ಸಂಸ್ಥೆ ಸ್ಥಾಪಿಸಿರುವ ಸುಮ ಶ್ರೀಹರ್ಷ ಅವರು ಮಾಡುತ್ತಿರುವ ಸಾಂಸ್ಕೃತಿಕ ಸೇವಾ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
    ಸಾಹಿತ್ಯದ ಕಾರ್ಯಕ್ರಮಗಳಿಗೆ ಜನರ ಪ್ರೋತ್ಸಾಹ ಕಡಿಮೆ, ಆದರೂ ಬಿಡದೆ ಸುಮ ಅವರು ಕಾರ್ಯಕ್ರಮ ಸಂಘಟಿಸಿ ತಮ್ಮ ಸಾಂಸ್ಕೃತಿಕ ಅಭಿಮಾನ ತೋರುತ್ತಿದ್ದಾರೆ, ಮುಂದೆ ಇವರ ಎಲ್ಲಾ ಕಾರ್ಯಗಳಿಗೂ ಯಶಸ್ಸು ಸಿಗಲಿ ಎಂದು ಡಾ. ಲಕ್ಷ್ಮಣ ದಾಸ್ ಹಾರೈಸಿದರು.
    ಲೇಖಕಿ, ತುಮಕೂರು ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶೈಲಾ ನಾಗರಾಜ್ ಮಾತನಾಡಿ, ಹೆಣ್ಣು ಮಗಳೊಬ್ಬಳು ಸಾಹಿತ್ಯ ಪರವಾದ ಸಂಸ್ಥೆ ಕಟ್ಟಿ ಮುನ್ನಡೆಸುತ್ತಿರುವುದು ಸಾಮಾನ್ಯ ಕೆಲಸವಲ್ಲ, ಸುಮಾ ಶ್ರೀಹರ್ಷರವರು ಈ ಕಾರ್ಯದಲ್ಲಿ ಸಫಲರಾಗುತ್ತಾರೆ, ಇವರಿಗೆ ಸಹೃದಯಿಗಳ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.ಸಾಹಿತ್ಯ, ಸಾಂಸ್ಕೃತಿಕ ಪ್ರೇಮಿಗಳು ಇಂತಹ ಸಂಸ್ಥೆಗಳ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಂಬಲವಾಗಿ ನಿಲ್ಲಬೇಕು ಎಂದು ವಿನಂತಿಸಿದರು.
     ಸಂಸ್ಥೆ ಅಧ್ಯಕ್ಷೆ ಸುಮಾ ಶ್ರೀಹರ್ಷ, ಪತ್ರಕರ್ತರಾದ ಆರ್. ಕಾಮರಾಜ್, ಚಿ. ನಿ. ಪುರುಷೋತ್ತಮ್, ಸಾಹಿತಿಗಳಾದ ಮುದ್ದೇನಹಳ್ಳಿ ನಂಜಯ್ಯ, ಎಂ. ಜಿ. ಸಿದ್ಧರಾಮಯ್ಯ, ಹರಳೂರು ಶಿವಕುಮಾರ್, ಮುಖಂಡರಾದ ಡಾ. ಎನ್. ಎಸ್. ಶ್ರೀಧರ್, ಪಾವಗಡ ಶ್ರೀರಾಮ್, ಶಂಕರ್ ಹೆಗಡೆ, ಗಣೇಶ್ ಪ್ರಸಾದ್, ವೈ. ಕೆ. ರಾಮರಾಜು, ಅಖಿಲೇಶ್ ಮೊದಲಾದವರು ಭಾಗವಹಿಸಿದ್ದರು.150ನೇ ಗಾಂಧಿ ಜಯಂತಿ ಪ್ರಯುಕ್ತ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಕವಿ ಎನ್. ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು.ಸಾಹಿತಿಗಳಾದ ರವೀಂದ್ರನಾಥ್ ಟ್ಯಾಗೂರ್, ನಾಗರಾಜ್ ದೊಂಬರನಹಳ್ಳಿ, ವಿ. ಪಿ. ಕೃಷ್ಣ ಮೂರ್ತಿ, ಅಬ್ಬಿನಹೊಳೆ ಸುರೇಶ್  ಮತ್ತಿತರರು ಭಾಗವಹಿಸಿದ್ದರು.ಈ ವೇಳೆ ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link