ನವದೆಹಲಿ
ದೇಶದ್ಯಾಂತ ತೀವ್ರ ಸಂಚಲನ ಸೃಷ್ಟಿಸಿರುವ ಪಂಜಾಬ್ – ಮಹಾರಾಷ್ಟ್ರ ಕೋ- ಅಪರೇಟಿವ್ (ಪಿಎಮ್‍ಸಿ) ಬ್ಯಾಂಕ್ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿರುವ ಬೆನ್ನಲ್ಲೇ ಬಿಜೆಪಿಯ 12 ಮಂದಿ ನಿರ್ದೇಶಕರನ್ನು ನೇಮಕಮಾಡಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿಗೆ ಪರಿಹಾರ ಕಲ್ಪಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿ, ಬದ್ದತೆ ಪ್ರದರ್ಶಿಸಬೇಕು. ಬ್ಯಾಂಕಿನ 12 ಮಂದಿ ನಿರ್ದೇಶಕರು ಬಿಜೆಪಿಗೆ ಸೇರಿದವರಾಗಿದ್ದು, ಹಾಗಾಗಿ ಅವರನ್ನು ಸಿಬಿಐ ಬಂಧಿಸುವುದಿಲ್ಲ. ಕೇಸರಿ ಪಕ್ಷಕ್ಕೆ ಸೇರಿರುವ ಕಾರಣ ಜಾರಿ ನಿರ್ದೇನಾಲಯ ಖಂಡಿತ ಕೂಡಾ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್‍ಸಿಬಾಲ್ ಶನಿವಾರ ಒತ್ತಾಯಿಸಿದ್ದರು.
ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಸಂವಿಧಾನ 370 ವಿಧಿ ಕುರಿತು ಯೋಚಿಸುವುದರ ಬದಲು ಪಿ ಎಂ ಸಿ ಬಿಕ್ಕಟ್ಟಿನಿಂದ ಹಣಕಳೆದುಕೊಂಡಿರುವ ಠೇವಣಿದಾರರು, ಗ್ರಾಹಕರ ಜೀವಗಳನ್ನು ಉಳಿಸುವತ್ತ ಗಮನ ಹರಿಸಬೇಕು. ಈ ವಿಷಯದ ಬಗ್ಗೆ ಪ್ರಧಾನಿ ಸ್ಪಷ್ಟ ಭರವಸೆ ನೀಡಬೇಕು ಎಂದು ಸಿಬಲ್ ಒತ್ತಾಯಿಸಿದ್ದಾರೆ.
ತಮ್ಮ ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳಿಕೊಂಡು ದೇಶಾದ್ಯಂತ ತಿರುಗಾಡುತ್ತಿದ್ದಾರೆ. ಇನ್ನೂ .. ಸಂವಿಧಾನ ವಿಧಿ 370 ರ ಬಗ್ಗೆ ಬಾಧೆಪಡದೆ ಪಿಎಂಸಿ ಬ್ಯಾಂಕ್ ಬಿಕ್ಕಟ್ಟನ್ನು ಪರಿಹರಿಸಲು ಏನಾದರೂ ಮಾಡಲು ಸಾಧ್ಯವೋ .. ಇಲ್ಲವೊ ಎಂಬುದನ್ನು ದೇಶದ ಜನರಿಗೆ ತಿಳಿಸಬೇಕು ಎಂದು ಸಿಬಾಲ್ ಒತ್ತಾಯಿಸಿದ್ದಾರೆ. ಆದಾಗ್ಯೂ, ದೇಶಾದ್ಯಂತ ವ್ಯಾಪಿಸಿರುವ ಬಿಕ್ಕಟ್ಟಿನ ನಂತರ ಬ್ಯಾಂಕ್ ವಹಿವಾಟಿನ ಮೇಲೆ ರ್ಆ ಬಿ ಐ ನಿರ್ಬಂಧ ಹೇರಿರುವುದರಿಂದ ಗ್ರಾಹಕರು ತೀವ್ರ ಒತ್ತಡದಲ್ಲಿದ್ದಾರೆ. ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ಈ ಸಂಖ್ಯೆ ನಾಲ್ಕು ಎಂದು ಹೇಳಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








