ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ..!

ಹುಬ್ಬಳ್ಳಿ:

   ಸದಾ ಜನರಿಂದ ತುಂಬಿತುಳಕುವ ರೈಲ್ವೆ ನಿಲ್ದಾಣಗಳಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣವು ಒಂದು ಹಾಗು ಹುಬ್ಬಳ್ಳಿ ಎಂದರೆ ಕರ್ನಾಟಕದ ವಾಣಿಜ್ಯ ರಾಜಧಾನಿಯೂ ಹೌದು ಅಂತಹುದರಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರಲ್ಲಿ ಅನುಮಾನಾಸ್ಪದ ಸ್ಫೋಟ ವರದಿಯಾಗಿದೆ ಈ ಸ್ಪೋಟ ನಗರದ ಜನರನ್ನು ಭಯಭೀತರನ್ನಾಗಿ ಮಾಡಿದೆ.

   ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಇಂದು ಮಧ್ಯಾಹ್ನ ಈ ಸ್ಪೋಟ ಸಂಭವಿಸಿದ್ದು, ಸ್ಪೋಟದಲ್ಲಿ ಸ್ಟೇಷನ್ ಮಾಸ್ಟರ್ ಕಚೇರಿಯ ಗಾಜಿನ ಬಾಗಿಲು ಒಡೆದಿದ್ದಲ್ಲದೆ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

   ಇದು ಕಡಿಮೆ ತೀವ್ರತೆಯ ಹೊಂದಿರುವ ಸ್ಫೋಟವಾಗಿದ್ದು ಹುಬ್ಬಳ್ಳಿಯ ಮಂತೂರು ರಸ್ತೆಯ ಮೂಲದ ವ್ಯಕ್ತಿಗೆ  ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಗಾಯಾಳುವನ್ನು  ಹುಸೇನ್ ಸಾಬ್ (22) ಎಂದು ಗುರುತಿಸಲಾಗಿದ್ದು ಈತ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ 

    “ಗಾಯಗೊಂಡ ಹುಸೇನ್ ಕೈಯಲ್ಲಿ ಸಾಗಿಸುತ್ತಿದ್ದ ಸೂಟ್‌ಕೇಸ್ ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟದಿಂದಾಗಿ ಷನ್ ಮಾಸ್ಟರ್ ಕಚೇರಿಯ ಕಿಟಕಿಗಳನ್ನು ಒಡೆದಿದೆ. ಸ್ಥಳಕ್ಕೆ ಬಾಂಬ್ ಪತ್ತೆ ದಳ ಹಾಗೂ ವಿಶೇಷ ತನಿಖಾ ದಳಗಳನ್ನು ಕಳಿಸಲಾಗಿದೆ.ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link