ಅ.23ಕ್ಕೆ ಅನರ್ಹರ ವಿಚಾರಣೆ ಮುಂದೂಡಿಕೆ…!

ಬೆಂಗಳೂರು

     ಹದಿನೇಳು ಮಂದಿ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 23 ಕ್ಕೆ ಮುಂದೂಡಿದೆ.ಅಕ್ಟೋಬರ್ 22 ರಂದು ನಿಗದಿಯಾಗಿದ್ದ ಅನರ್ಹ ಶಾಸಕರ ವಿಚಾರಣೆ ಪ್ರಕ್ರಿಯೆಯನ್ನು ಒಂದು ವಾರ ಕಾಲ ಮುಂದೂಡುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮಾಡಿಕೊಂಡ ಮನವಿಯನ್ನು ಪುರಸ್ಕರಿಸದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ನಿಗದಿ ಪಡಿಸಿತು.

     ಈ ಹಿಂದೆ ಅನರ್ಹ ಶಾಸಕರ ಪ್ರಕರಣವನ್ನು ಅಕ್ಟೋಬರ್ 22 ರಂದು ವಿಚಾರಣೆಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿಗದಿಪಡಿಸಿತ್ತಾದರೂ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡುವಂತೆ ಮನವಿ ಮಾಡಿ ಕೊಂಡರು.ಆದರೆ ಅದನ್ನು ಒಪ್ಪದ ಸುಪ್ರೀಂಕೋರ್ಟ್ ವಿಚಾರಣೆ ಪ್ರಕ್ರಿಯೆಯನ್ನು ಇಪ್ಪತ್ಮೂರಕ್ಕೆ ನಿಗದಿಪಡಿಸಿದ್ದು ಆ ಮೂಲಕ ಬುಧವಾರ ಅನರ್ಹ ಶಾಸಕರ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಪ್ರಕ್ರಿಯೆ ನಡೆಯಲಿದೆ.

     ತಮ್ಮ ಮೇಲ್ಮನವಿ ಅರ್ಜಿ ತ್ವರಿತವಾಗಿ ವಿಚಾರಣೆಯಾಗಬೇಕು ಎಂದು ಬಯಸಿರುವ ಅನರ್ಹ ಶಾಸಕರು ಇದೇ ಕಾರಣಕ್ಕಾಗಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿ,ತಮ್ಮನ್ನು ಅನರ್ಹಗೊಳಿಸಿದ ಹಿಂದಿನ ಸ್ಪೀಕರ್ ಕ್ರಮಕ್ಕೆ ತಡೆಯೊಡ್ಡುವಂತೆ ಕೋರಿದ್ದರು.ತಮ್ಮನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ಸಹಜ ನ್ಯಾಯವನ್ನು ಪಾಲಿಸಿಲ್ಲ.ತಾವು ಶಾಸನ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕುರಿತು ವಿಚಾರಣೆಯನ್ನು ನಡೆಸಲಿಲ್ಲ ಎಂದು ಅನರ್ಹ ಶಾಸಕರು ದೂರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ