ಚಿತ್ರದುರ್ಗ: 
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ವಿರುದ್ದ ತೀವ್ರ ಅಸಮಧಾನ ವ್ಯಕ್ತವಾಗಿದೆ.ರಾಜ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾಂiÀರ್iಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡು ದ್ವಜಾರೋಹಣ ಮಾಡಬೇಕು. ಇದು ಸರ್ಕಾರಿ ನಿಯಮವೂ ಹೌದು. ಆದರೆ ಸಚಿವರು ತಮ್ಮ ಸ್ವಂತ ಜಿಲ್ಲೆಯ ಕಾರ್ಯಕ್ರಮಕ್ಕೆ ಗೈರಾಗಿರುವುದು ಕನ್ನಡಿಗರ ಆಕ್ರೊಶಕ್ಕೆ ಕಾರಣವಾಗಿದೆ.
ಸಚಿವರ ವಿರುದ್ದ ಪ್ರತಿಭಟನೆ
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಬಿ.ಶ್ರೀರಾಮುಲು ಚಿತ್ರದುರ್ಗದಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಆಚರಿಸುವ ಬದಲು ರಾಯಚೂರಿನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕನ್ನಡಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಸ್ವಚ್ಚವಾಗಿ ಕನ್ನಡ ಕಲಿಯುವಂತೆ ಕನ್ನಡ ಅಕ್ಷರ ಅಭ್ಯಾಸ ಪುಸ್ತಕವನ್ನು ಬಿ.ಶ್ರೀರಾಮುಲುಗೆ ಪೋಸ್ಟ್ ಮಾಡಿದರು.
ಎರಡನೆ ಬಾರಿಗೆ ಮಂತ್ರಿಯಾಗಿರುವ ಬಿ.ಶ್ರೀರಾಮುಲು ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿ ಚಿತ್ರದುರ್ಗಕ್ಕೆ ಹಾಗೂ ಕನ್ನಡ ನಾಡು ನುಡಿಗೆ ಏನಾದರೂ ಕೊಡುಗೆ ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಅವಮಾನ ಮಾಡುವ ಮೂಲಕ ಸಚಿವರು ರಾಯಚೂರಿಗೆ ತೆರಳಿದ್ದಾರೆ. ದುರಂತವೆಂದರೆ ಅಲ್ಲಿಯೂ ಕನ್ನಡ ಧ್ವಜ ಹಾರಿಸದೆ ಕನ್ನಡ ಭಾಷೆಯನ್ನು ಅವಮಾನಿಸಿ ದ್ದಾರೆ , ಭಾಷಣದುದ್ದಕ್ಕೂ ಕನ್ನಡವನ್ನು ಕಗ್ಗೊಲೆ ಮಾಡಿದ್ದಾರೆ.
ಹಾಗಾಗಿ ಶುದ್ದವಾಗಿ ಕನ್ನಡ ಮಾತನಾಡುವುದನ್ನು ಕಲಿಯಲಿ ಎಂದು ಕನ್ನಡ ಅಕ್ಷರ ಅಭ್ಯಾಸ ಪುಸ್ತಕವನ್ನು ಪ್ರಧಾನ ಅಂಚೆ ಕಚೇರಿಯ ಮೂಲಕ ಸಚಿವರಿಗೆ ರಿಜಿಸ್ಟರ್ ಪೋಸ್ಟ್ ರವಾನಿಸಿದ ಪ್ರತಿಭಟನಾಕಾರರು ಕನ್ನಡ ಉಳಿವಿನತ್ತ ಗಮನ ಹರಿಸುವಂತೆ ಒತ್ತಾಯಿಸಿದರು.
ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ತಾಲೂಕು ಅಧ್ಯಕ್ಷ ಟಿ.ಆನಂದ್, ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಡಗವಳ್ಳಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ಹನುಮಂತರಾಯ ಚೌಳೂರು ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








