ನಗರದ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ

0
15

ಚಳ್ಳಕೆರೆ

        ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಪತ್ತೆಗೆ ಪೊಲೀಸ್ ಇಲಾಖೆ ಕೈಗೊಂಡಿರುವ ಹಲವಾರು ಬಿಗಿಕ್ರಮಗಳಿಗೆ ಬಾರ್ ಮತ್ತು ಡಾಬಾ ಮಾಲೀಕರು ಸಹಕಾರ ನೀಡಬೇಕೆಂದು ಚಳ್ಳಕೆರೆ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮನವಿ ಮಾಡಿದ್ದಾರೆ.

      ಅವರು, ನಗರದ ಡಿವೈಎಸ್‍ಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪೆಟ್ರೋಲ್ ಬಂಕ್, ಬಾರ್ ಮತ್ತು ಡಾಬಾ ಮಾಲೀಕರ ಸಭೆಯನ್ನು ಆಯೋಜಿಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ತಾನೇ ಹಿರಿಯೂರು ತಾಲ್ಲೂಕಿನಲ್ಲಿ ಪೆಟ್ರೋಲ್ ಬಂಕ್ ದರೋಡೆ ಪ್ರಕರಣದಲ್ಲಿ ನಗರ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಸಿಸಿ ಕ್ಯಾಮರವನ್ನು ಅಳವಡಿಸಿಕೊಳ್ಳಬೇಕು.

     ಯಾವುದೇ ಅಪರಿಚಿತ ವಾಹನಗಳು, ವ್ಯಕ್ತಿಗಳು ಬಂದಲ್ಲಿ ಅವುಗಳ ಮಾಹಿತಿಯನ್ನು ತಕ್ಷಣವೇ ಪೊಲೀಸರಿಗೆ ನೀಡಬೇಕು. ಬಾರ್ ಮತ್ತು ಡಾಬಾ ಮಾಲೀಕರಿಗೆ ತೊಂದರೆ ಕೊಡುವ ಉದ್ದೇಶ ಪೊಲೀಸ್ ಇಲಾಖೆಗೆ ಇಲ್ಲ. ಎಲ್ಲರೂ ಪ್ರತಿನಿತ್ಯ ರಾತ್ರಿ 10.30ಕ್ಕೆ ತಮ್ಮ ಬಾರ್ ಹಾಗೂ ಡಾಬಾಗಳನ್ನು ಕಡ್ಡಾಯವಾಗಿ ಬಂದ್ ಮಾಡಲೇ ಬೇಕು. ಪೊಲೀಸರ ಸೂಚನೆಯನ್ನು ಪಾಲಿಸದ ಬಾರ್ ಮತ್ತು ಡಾಬಾ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

       ಪ್ರಾಸ್ತಾವಿಕವಾಗಿ ಮಾತನಾಡಿದ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಚಳ್ಳಕೆರೆ ನಗರ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ವಿವಿಧ ಕಡೆಗಳಿಂದ ಕಳ್ಳರು ಆಗಮಿಸಿ ತಮ್ಮ ಕೃತ್ಯವನ್ನು ವೆಸಗಲು ಹಲವಾರು ರೀತಿಯ ಸೌಲಭ್ಯ ಕಂಡುಕೊಂಡಿದ್ಧಾರೆ. ಬೇರೆ ಕಡೆಯಿಂದ ಬರುವ ಕಳ್ಳರು ಹಾಗೂ ಅಪರಿಚಿತ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ಮಾಡುವ ಕಳ್ಳತನ ಹಾಗೂ ದರೋಡೆ ಪ್ರಕರಣಗಳಿಗೆ ಇಲ್ಲಿರುವ ಡಾಬಾ, ಬಾರ್ ಹಾಗೂ ಇತರೆಡೆಗಳಲ್ಲಿ ಕಾಲ ಕಳೆಯುತ್ತಾರೆ. ಕೆಲವರು ಸಿನಿಮಾಕ್ಕೆ ಹೋಗಿಬಂದು ಸಹ ಕಳ್ಳತನ ಮಾಡುತ್ತಾರೆ. ರಾತ್ರಿ 10.30ಕ್ಕೆ ಎಲ್ಲರೂ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದಲ್ಲಿ ಅಪರಿಚಿತ ವ್ಯಕ್ತಿಗಳು ಹಾಗೂ ಕಳ್ಳತನಕ್ಕೆ ಯತ್ನಿಸುವವರ ಬಗ್ಗೆ ಪೊಲೀಸರು ನಿಗಾವಹಿಸಿ ಕ್ರಮ ಕೈಗೊಳ್ಳಲಿದ್ಧಾರೆ. ಕಳ್ಳತನ ಪ್ರಕರಣಗಳ ಪತ್ತೆಗೆ, ಕಳ್ಳರ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿ ಪೊಲೀಸ್ ಇಲಾಖೆಗೆ ಬೇಕಾಗಿದೆ. ಈ ನಿಟ್ಟಿನಲ್ಲಿ ನಗರದ ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕೈಗೊಳ್ಳುವ ಎಲ್ಲಾ ಕ್ರಮಗಳು ನಿಮ್ಮ ಸಹಕಾರ ಅಗತ್ಯವೆಂದರು.

       ಪಿಎಸ್‍ಐ ಕೆ.ಸತೀಶ್‍ನಾಯ್ಕ ಮಾತನಾಡಿ, ಸಾರ್ವಜನಿಕರ ಆಸ್ತಿ ಸಂರಕ್ಷಣೆಯ ಜೊತೆಗೆ ಕಳ್ಳತನ ಪ್ರಕರಣವೂ ಸಹ ನಡೆಯದಂತೆ ಇಲಾಖೆ ಜಾಗೃತೆ ವಹಿಸಬೇಕಾಗಿದೆ. ನಗರದ ಪ್ರಮುಖ ರಸ್ತೆಗಳ ಸಿಸಿ ಕ್ಯಾಮರಗಳ ಕಾರ್ಯಚರಣೆಯ ಬಗ್ಗೆ ನಿಗಾ ವಹಿಸಲಾಗುವುದು. ಪೊಲೀಸ್ ಇಲಾಖೆಗೆ ನಿರಂತರವಾಗಿ ಎಲ್ಲಾ ರೀತಿಯ ಸಹಕಾರವನ್ನು ಇಲಾಖೆ ಅಪೇಕ್ಷಿಸುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here