ಚಿತ್ರದುರ್ಗ:
ಇಲ್ಲಿನ ಆಕಾಶವಾಣಿ ಮುಂಭಾಗವಿರುವ ಡಾಕ್ಟರ್ ವಾಟರ್ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಸೋರಿಕೆಯಾಗುತ್ತಿರುವುದು ಚರಂಡಿ ಸೇರಿ ವ್ಯರ್ಥವಾಗುವುದನ್ನು ತಡೆಯುವುದಕ್ಕಾಗಿ ಕೆಳಗೋಟೆಯ ಯುವಕರು ಸ್ವತಃ ತಾವುಗಳೆ ಸುಮಾರು ಮೂವತ್ತು ಅಡಿಗೂ ಹೆಚ್ಚು ಉದ್ದದ ಗುಂಡಿ ತೆಗೆದು ಪೈಪ್ ಅಳವಡಿಸಿ ಪಕ್ಕದಲ್ಲೇ ಇರುವ ರಾಯರಬಾವಿಗೆ ನೀರು ಸೇರುವಂತೆ ಮಾಡಿ ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ ಎನ್ನುವ ಸಂದೇಶವನ್ನು ಜನತೆಗೆ ಸಾರಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಹೆಚ್.ಅಂಜಿನಪ್ಪ ನೇತೃತ್ವದಲ್ಲಿ ವಿಜಿ, ವಿಶ್ವ, ಮಹಂತೇಶ್, ರೇವ, ರವಿ, ಸಂತೋಷ್ ಇವರುಗಳು ಕೈಯಿಂದ ಕಾಸು ಹಾಕಿ ಪೈಪ್‍ಗಳನ್ನು ಖರೀಧಿಸಿ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ರಾಯರ ಬಾವಿಗೆ ಶುದ್ದ ಕುಡಿಯುವ ನೀರಿನ ಘಟಕದಿಂದ ಜಿನುಗುತ್ತಿರುವ ನೀರು ಹರಿಯುವಂತೆ ಮಾಡಿದ್ದಾರೆ.
ಡಾಕ್ಟರ್ ವಾಟರ್ ಶುದ್ದ ಕುಡಿಯುವ ನೀರಿನ ಘಟಕದಿಂದ ವ್ಯರ್ಥವಾಗಿ ಸೋರಿಕೆಯಾಗುತ್ತಿದ್ದ ನೀರು ಚರಂಡಿ ಪಾಲಾಗಬಾರದೆಂದು ಚಿಂತಿಸಿದ ಕೆಳಗೋಟೆ ಯುವಕರ ಗುಂಪು ಕೈಯಲ್ಲಿ ಹಾರೆ, ಚಲಕೆ ಹಿಡಿದು ಗುಂಡಿ ತೋಡಿ ಪೈಪ್‍ಲೈನ್ ಮೂಲಕ ಶುದ್ದ ಕುಡಿಯುವ ನೀರಿನ ಘಟಕದ ನೀರು ರಾಯರ ಬಾವಿ ಸೇರುವಂತೆ ಶ್ರಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
