
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಕುರಿತು ಬಿಜೆಪಿ ಮೌನ..?
ನವದೆಹಲಿ : ತಿಂಗಳ ಆರಂಭದಲ್ಲೇ ಹೋಟೆಲ್ ಉದ್ಯಮಕ್ಕೆ ದೊಡ್ಡ ಶಾಕ್ ನೀಡಿರುವ ತೈಲ ಕಂಪನಿಗಳು ದೇಶದಾದ್ಯಂತ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಏಕಾಏಕಿ 993 ರೂ. ಗಳಿಗೆ ಏರಿಕೆ ಮಾಡಿವೆ. ವಾಣಿಜ್ಯ ಸಿಲಿಂಡರ್ ದರ ದುಬಾರಿಯಾಗಿರುವುದರಿಂದ ಹೋಟೆಲ್‌ನ ತಿಂಡಿತಿನಿಸುಗಳ ಬೆಲೆಗಳು ಏರಿಕೆಯಾಗಲಿವೆ. ಹೀಗಾಗಿ ಶ್ರೀಸಾಮಾನ್ಯನ ಜೇಬಿಗೆ ಭಾರೀ ಕತ್ತರಿ ಬೀಳಲಿದೆ.
ಗೃಹ ಬಳಕೆಯ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮಾರ್ಚ್ 7 ರಂದು 60 ರೂ. ಹೆಚ್ಚಳ ಮಾಡಲಾಗಿತ್ತು. ಈಗ ವಾಣಿಜ್ಯ ಸಿಲಿಂಡರ್ ಮಾತ್ರ ಏರಿಕೆ ಮಾಡಲಾಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದ ಬಳಿಕ ವಾಣಿಜ್ಯ ಎಲ್‌ಪಿಜಿ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಲಾಗಿದೆ. ಮಾರ್ಚ್ 1 ರಂದು 144 ರೂ. ಏರಿಕೆ ಮಾಡಲಾಗಿತ್ತು. ಏ. 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ವನ್ನು 200 ರೂ. ಹೆಚ್ಚಳಮಾಡಲಾಗಿತ್ತು. ಈಗ ಮತ್ತೆ 993 ರೂ.ರಷ್ಟು ಬಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಈ ಹಿಂದೆ ವಾಣಿಜ್ಯ ಸಿಲಿಂಡರ್ 2,078. 50 ಪೈಸೆಯಷ್ಟಿದ್ದ ದರ ಈಗ 3,071.5 ರೂ. ತಲುಪಿದೆ. ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು ಈ ಬೆಲೆ ಏರಿಕೆ ಸಾಮಾನ್ಯ ಜನರ ಮೇಲೂ ಹೊರೆಯಾಗಲಿದ್ದು, ಊಟ , ತಿಂಡಿಗಾಗಿ ಹೋಟೆಲ್ ಅನ್ನು ನೆಚ್ಚಿಕೊಂಡಿರುವವರಿಗೆ ಸಿಲಿಂಡರ್ ದರ ಏರಿಕೆ ಬರೆ ಹಾಕಿದೆ.
ತೈಲ ಮಾರಾಟ ಕಂಪನಿಗಳು ಪ್ರತಿ 1ನೇ ತಾರೀಕಿನಿಂದು ಎಲ್ ಪಿಜಿ, ಎಟಿಎಫ್ ದರ ಪರಿಷ್ಕರಿಸುತ್ತವೆ. ಪಶ್ಚಿಮ ಏಷ್ಯಾದಲ್ಲಿ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಉಂಟಾಗಿದ್ದು, ಜಾಗತಿಕ ತೈಲ ಬೆಲೆಗಳು ಶೇ. 50 ರಷ್ಟು ಹೆಚ್ಚಾಗಿವೆ.
ವಾಣಿಜ್ಯ ಸಿಲಿಂಡರ್‌ನ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ. ಒಫೆಕ್ ಒಕ್ಕೂಟದಿಂದ ಯುಎಇ ಹೊರ ಬರಲು ನಿರ್ಧರಿಸಿರುವುದು ಪ್ರಮುಖ ಕಾರಣವಾಗಿದೆ. ಜಗತ್ತಿನ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟçಗಳಲ್ಲಿ ಒಂದಾದ ಯುಎಇ ಒಕ್ಕೂಟದಿಂದ ಹೊರ ಬಂದರೆ ಭವಿಷ್ಯದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಜೊತೆಗೆ ತೈಲ ಬೆಲೆಗಳು ಹೆಚ್ಚಾಗುತ್ತವೆ ಹಾಗಾಗಿ ಕೇಂದ್ರ ಸರ್ಕಾರ ಗೃಹ ಬಳಕೆ ಎಲ್ ಪಿಜಿ ಮತ್ತು ಪೆಟ್ರೋಲ್, ಡೀಸೆಲ್ ಬಳಕೆದಾರರ ಹಿತವನ್ನು ರಕ್ಷಿಸಲು ತೈಲ ಕಂಪನಿಗಳ ಹೆಚ್ಚಾದ ಹೊರೆಯನ್ನು ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆ ಮೂಲಕ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ.ವಾಣಿಜ್ಯ ಎಲ್ ಪಿಜಿ ಬೆಲೆ ಏರಿಕೆಯೂ ಹೋಟೆಲ್ ಉದ್ಯಮದ ಜೊತೆಗೆ ಆಸ್ಪತ್ರೆ ಎಲ್ ಪಿಜಿ ಬಳಸುವ ಕೆಲ ಉತ್ಪಾದಕ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆ.ಹೋಟೆಲ್ ಉದ್ಯಮಕ್ಕೆ ಹೊಡೆತ ಈ ದರ ಏರಿಕೆ ಹೋಟೆಲ್, ರೆಸ್ಟೋರೆಂಟ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ತಿಂಡಿ-ತಿನಿಸು ಕಾಫೀ, ಟೀ ದರ ಏರಿಕೆಯಾಗಲಿವೆ.ವಾಣಿಜ್ಯ ಸಿಲಿಂಡರ್ ದರ : 993 ರೂಗೆ ಏರಿಕೆಯಾದ ಹಿನ್ನೆಲೆ ಹೋಟೆಲ್ ಮಾಲೀಕರು ತೈಲ ಕಂಪನಿಗಳ ಕ್ರಮಕ್ಕೆ ಆಕ್ರೋಶ ಹೊರಹಾಕಿದ್ದಾರೆ. ದರ ಏರಿಕೆಯಿಂದಾಗಿ ಹೊಟೇಲ್ ಉದ್ಯಮ ನಡೆಸೋದು ಬಹಳಷ್ಟು ಕಷ್ಟವಾಗಿದೆ.
ಇದರ ಹೊರೆಯನ್ನು ಜನರ ಮೇಲೆ ಹಾಕಬೇಕಾಗುತ್ತದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಮೇಲೆ ವಿಧಿಸಿರುವ 18% ಜಿಎಸ್‌ಟಿಯನ್ನು ತೆಗೆಯಬೇಕು ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಆಗ್ರಹಿಸಿದ್ದಾರೆ.
ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ
ಮುಂಬೈ – 3024 ರೂ.
ಬೆಂಗಳೂರು – 3152 ರೂ.
ನವದೆಹಲಿ – 3071.50 ರೂ.
ಕೊಲ್ಕತ್ತಾ – 3202 ರೂ.
ಚೆನ್ನೆöÊ -3237 ರೂ.
ಬೆಲೆ ಏರಿಕೆ ತೀರ್ಮಾನ ಖಂಡನೀಯ : ಡಿಸಿಎಂ
ಕೇAದ್ರ ಸರ್ಕಾರದ ಬೆಲೆ ಏರಿಕೆ ತೀರ್ಮಾನ ಖಂಡನೀಯ. ನಾವು ಇದರ ಹೋರಾಟ ಮುಂದುವರಿಸುತ್ತೇವೆ. ರಾಜ್ಯ ಬಿಜೆಪಿ ನಾಯಕರಾದ ವಿಜಯೇಂದ್ರ, ಅಶೋಕ್ ಎಲ್ಲರೂ ಬೊಗಳೆ ದಾಸರು. ಕೇವಲ ಖಾಲಿ ಮಾತು, ಟೀಕೆಗೆ ಮಾತ್ರ ಸೀಮಿತ. ಅವರಿಗೆ ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ, ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಹೋರಾಟ ಆರಂಭಿಸಲಿ. ಬೇರೆ ಎಲ್ಲಾ ವಿಚಾರದ ಬಗ್ಗೆ ಮಾತನಾಡುವವರು, ಈ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ನೆರೆ ರಾಷ್ಟçಗಳ ಜೊತೆ ಉತ್ತಮ ಸಂಬAಧ ಇಟ್ಟುಕೊಳ್ಳದೆ, ವೈರತ್ವ ಬೆಳೆಸಿಕೊಂಡಿದೆ. ನಮ್ಮ ಮಿತ್ರ ರಾಷ್ಟçಗಳು ವೈರಿ ರಾಷ್ಟçಗಳಾಗಿವೆ. ವಿದೇಶಾಂಗ ನೀತಿ, ವ್ಯಾಪಾರ ಒಪ್ಪಂದ ವೈಫಲ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಮುಗಿದ ಬಳಿಕ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಮತದಾರರಿಗೆ ವಂಚಿಸಿ, ಬೆನ್ನಿಗೆ ಚೂರಿ ಹಾಕಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆಟೋ ಚಾಲಕರಿಗೂ ಬಿಗ್ ಶಾಕ್

ಆಟೋ ಚಾಲಕರಿಗೆ ಮತ್ತೊಂದು ಬಿಗ್ ಶಾಕ್. ಆಟೋ ಎಲ್‌ಪಿಜಿ ದರದಲ್ಲಿ 5 ರೂಪಾಯಿ 73 ಪೈಸೆಯಷ್ಟು ಏರಿಕೆ ಆಗಿದ್ದು, ಚಾಲಕರ ಖರ್ಚು ಮತ್ತಷ್ಟು ಹೆಚ್ಚಾಗಿದೆ. ಲೀಟರ್‌ಗೆ 89.35 ರೂಪಾಯಿ ಇದ್ದ ಆಟೋ ಎಲ್ಪಿಜಿ ದರ, ಇಂದಿನಿAದ 95.08 ರೂಪಾಯಿಗೆ ಏರಿಕೆಯಾಗಿದೆ. ಈ ದರ ಏರಿಕೆ ಸರ್ಕಾರದ ನಿಯಂತ್ರಣದಲ್ಲಿರುವ ಆಟೋ ಎಲ್ಪಿಜಿ ಬಂಕ್‌ಗಳಲ್ಲಿ ಅನ್ವಯವಾಗಿದ್ದು, ಚಾಲಕರು ಹೆಚ್ಚಿನ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಖಾಸಗಿ ಎಲ್ಪಿಜಿ ಬಂಕ್‌ಗಳಲ್ಲಿ ದರ ಏರಿಕೆ ಒಂದೇ ರೀತಿಯಲ್ಲಿ ಇಲ್ಲದೆ, ಬಂಕ್‌ಗಿAತ ಬಂಕ್‌ಗೆ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಚಾಲಕರಲ್ಲಿ ಗೊಂದಲವೂ ಹೆಚ್ಚಾಗಿದೆ. ಇಂಧನ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರು, ಭಾಡಿಗೆ ಹೆಚ್ಚಿಸುವ ಕುರಿತು ಚಿಂತನೆ ನಡೆಸುವ ಸಾಧ್ಯತೆ ಇದೆ. ಇದರ ಪರಿಣಾಮ ಪ್ರಯಾಣಿಕರ ಮೇಲೂ ಬೀಳುವ ಸಾಧ್ಯತೆ ಇದೆ. ಎಲ್ಪಿಜಿ ದರ ಏರಿಕೆ ನಗರ ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ.








