ಬೆಂಗಳೂರು

ಸರ್ಕಾರಿ ಮತ್ತು ಖಾಸಗಿಗೆ ಸಂಬಂಧಿಸಿದಂತೆ ಕಡತ, ಸುತ್ತೋಲೆ ಬಂದ ಸಂದರ್ಭದಲ್ಲಿ ಅದನ್ನು ತಿರಸ್ಕರಿಸಿ ಕನ್ನಡದಲ್ಲಿ ತರುವಂತೆ ಸೂಚಿಸಿ ಕಳುಹಿಸಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿದರೆ ಕೆಳಹಂತಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್ ತಿಳಿಸಿದರು.
ನಗರದ ಶೇಷಾದ್ರಿಪುರಂ ಮುಖ್ಯ ಕಾಲೇಜು ಸಭಾಂಗಣದಲ್ಲಿ ಹನುಮಂತರಾಯರ ಅಭಿನಂದನಾ ಸಮಿತಿ ಆಯೋಜಿಸಿದ್ದ, ಕನ್ನಡ ಕಟ್ಟಾಳು ಹನುಮಂತರಾಯರ 60ನೇ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕಡತ, ಸುತ್ತೋಲೆಗಳು ಕನ್ನಡದಲ್ಲಿದ್ದರೆ ಮಾತ್ರ ವಿಲೇವಾರಿ ಮಾಡುತ್ತಿದ್ದು ಇದರಿಂದ ಕೆಳಹಂತಗಳಲ್ಲಿ ಕನ್ನಡ ಬಳಕೆಹೆಚ್ಚುತ್ತಿತ್ತು ಎಂದರು.
ಸರ್ಕಾರಿ ಕಚೇರಿ ವಲಯದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಎನ್ನುವ ಸಂದೇಶ ಹೋಗುವ ಮುಖ್ಯ ಅದರಂತೆ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಪ್ರತಿ ವ್ಯಕ್ತಿಗೆ ವೃತ್ತಿ, ಪ್ರವೃತ್ತಿ ಇರುತ್ತೆ. ವೃತ್ತಿ ಜೀವನೋಪಾಯಕ್ಕಾಗಿ ದಾರಿಯಾದರೆ, ಪ್ರವೃತ್ತಿ ಸಮಾಜಕ್ಕೆ ಕೊಡುಗೆ ನೀಡಲು ದಾರಿಯಾಗಬೇಕು.ಈನಿಟ್ಟಿನಲ್ಲಿ ಕನ್ನಡವನ್ನೇ ಪ್ರವೃತ್ತಿಯನ್ನು ಕನ್ನಡ ಮೈಗೂಡಿಸಿಕೊಂಡು ಹನುಮಂತರಾಯರು ದುಡಿದಿದ್ದಾರೆ ಎಂದರು.
ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ,ಕನ್ನಡ ಸಂಘಟನೆಗಳಲ್ಲಿಯೇ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿವೆ .ಒಂದು ಸಂಘಟನೆ ಮತ್ತೊಂದು ಸಂಘಟೆನೆ ಕುರಿತು ತಪ್ಪು ಕಲ್ಪನೆ ಹೊಂದಿದ್ದು, ಕೆಲವೊಮ್ಮೆ ಗಲಾಟೆಗಳು ನಡೆದಿರುವ ಘಟನೆಗಳು ಸಾಕ್ಷಿ ಇವೆ. ಇದು ಬದಲಾದರೆ ಮಾತ್ರ ಕನ್ನಡ ಗಟ್ಟಿಗೊಳಿಸಬೇಕಾಗಿದೆ ಎಂದರು.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರೇ ಒಂದು ಕನ್ನಡ ಬಾವೂಟ ವಿನ್ಯಾಸ ಮಾಡಿಕೊಂಡಿದ್ದರು. ಅಲ್ಲದೆ, ಈಗಿನ ಹಳದಿ ಮತ್ತು ಕೆಂಪು ಬಾವೂಟವನ್ನು ಹಲವುದಿನಗಳ ಕಾಲ ದ್ವೇಷಿಸುತ್ತಿದ್ದರು ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಗಳಾದ ಜೆ.ಹುಚ್ಚಪ್ಪ, ಎಂ.ರಾಮಚಂದ್ರಪ್ಪ, ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ ಆರ್.ಎಸ್.ಸತ್ಯನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಅಧ್ಯಕ್ಷ ಮಾಯಣ್ಣ, ಕನ್ನಡ ಪರ ಹೋರಾಟಗಾರ ಕೆ.ನರಸಿಂಹಶೆಟ್ಟಿ, ರು.ಬಸಪ್ಪ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








