ಇಸ್ಲಾಮಾಬಾದ್:
ನೆರೆಯ ಪಾಕಿಸ್ಥಾನದಲ್ಲಿ ಮೌಲಾನಾ ಫಜ್ಲೂರ್ ರೆಹಮಾನ್ ನೇತೃತ್ವದಲ್ಲಿ ನಡೆಯುತ್ತಿರುವ ಆಜಾದಿ ಚಳುವಳಿ ಕೊನೆಯ ಹಂತ ತಲುಪಿದ್ದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ರಾಜೀನಾಮೆ ನೀಡಲು 48 ಗಂಟೆಗಳ ಸಮಯಾವಕಾಶವನ್ನು ನೀಡಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನೆ ಇನ್ನು ಎರಡು ದಿನಗಳಲ್ಲಿ ಹೊಸ ತಿರುವು ಪಡೆಯಲಿದೆ ಎಂದು ಹೇಳಿದ್ದಾರೆ. ಬಲಪಂಥೀಯ ಆಲೋಚನೆಯಿರುವ ಜಮೈತ್-ಉಲೆಮಾ-ಇ-ಇಸ್ಲಾಮ್ ಫಜ್ಲ್(ಜೆಯುಐ-ಎಫ್) ನಾಯಕ ಬೃಹತ್ ಪ್ರತಿಭಟನೆಯ ಮುಂಚೂಣಿ ವಹಿಸಿದ್ದು ಇದನ್ನು ಆಜಾದಿ ಮಾರ್ಚ್ ಎಂದು ಕರೆದಿದ್ದಾರೆ.
2018ರ ಸಾರ್ವತ್ರಿಕ ಚುನಾವಣೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್ ಇಮ್ರಾನ್ ಖಾನ್ ಅವರು ರಾಜೀನಾಮೆ ಸಲ್ಲಿಸದೆ ಸರ್ಕಾರದ ಮಧ್ಯವರ್ತಿಗಳು ಮಾತುಕತೆಗೆ ಬರುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ