ಚಳ್ಳಕೆರೆ
ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಳೆದ ಹಲವಾರು ತಿಂಗಳುಗಳಿಂದ ಕಠಿಣ ಕ್ರಮ ಕೈಗೊಂಡಿದ್ದು, ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ಮರಳು ದಾಸ್ತಾನು ಮಾಡಿ, ಎತ್ತಿನ ಗಾಡಿಯ ಮೂಲಕ ಮಾರಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ಧಾರೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಪಿಎಸ್‍ಐ ನೂರ್ ಆಹಮ್ಮದ್ ಸಾರ್ವಜನಿಕ ಮಾಹಿತಿ ಮೇರೆಗೆ ಡಿವೈಎಸ್ಪಿ ಮತ್ತು ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಬೊಮ್ಮಸಮುದ್ರ ರಸ್ತೆಯ ಮೈರಾಡ ಕಾಲೋನಿಯ ಸರ್ಕಾರದ ಹಳ್ಳದಲ್ಲಿ ಸುಮಾರು 5 ಟ್ರ್ಯಾಕ್ಟರ್ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಕಾರಿ ಹಳ್ಳದಲ್ಲಿ ಮರಳು ದಾಸ್ತಾನು ಮಾಡಿದ್ದ ಬಗ್ಗೆ ಮಾಹಿತಿ ಪಡೆದ ನಂತರ ಮೈರಾಡ ಕಾಲೋನಿ ನಿವಾಸಿ ಪಾಪಣ್ಣ ಎಂಬುವವರು ದಾಸ್ತಾನು ಮಾಡಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಕ್ರಮ ಮರಳು ಪತ್ತೆಕಾರ್ಯದಲ್ಲಿ ಮುಖ್ಯಪೇದೆ ತಿಪ್ಪಾಬೋವಿ, ಏಕಾಂತರೆಡ್ಡಿ, ಅಣ್ಣಪ್ಪನಾಯ್ಕ, ಮಂಜುನಾಥ ಮುಂತಾದವರು ಸಹಕರಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ