ಆಧುನಿಕತೆಗೆ ತಕ್ಕಂತೆ ಮಾರುಕಟ್ಟೆ ಜ್ಞಾನ ಹೊಂದಬೇಕು;ವಿನೋತ್ ಪ್ರಿಯಾ

ಚಿತ್ರದುರ್ಗ

    ಜೀವನದಲ್ಲಿ ಕೌಶಲ್ಯಭರಿತರಾಗಿ ಆಧುನಿಕತೆಗೆ ತಕ್ಕಂತೆ ಮಾರಕಟ್ಟೆಯ ಜ್ಞಾನವನ್ನು ಪಡೆದು ಕ್ರಿಯಾಶೀಲ ರಾಗಿರಿ ಎಂದು ಜಿಲ್ಲಾಧಿಕಾರಿ ಶ್ರೀಮತಿ ವಿನೂತ್ ಆರ್. ಪ್ರಿಯಾ ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.

    ರುಡ್‍ಸೆಟ್ ಸಂಸ್ಥೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ಉದ್ಯಮಶೀಲತಾ ಭಿವೃದ್ಧಿ ತರಬೇತಿಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೆ, ಚೇತನಾ ಮತ್ತು ಧನಶ್ರೀ ಯೋಜನೆ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಕಂಪ್ಯೂಟರ್ ಡಿ.ಟಿ.ಪಿ. ಮತ್ತು ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ತರಬೇತಿ ಶಿಬಿರಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

     ಸರ್ಕಾರ ಜನಸಮುದಾಯದ ಏಳಿಗೆಗೆ ಅಡ್ಡಿಯಾಗಿರುವ ಕೆಲ ಅಸಮತೋಲನಗಳನ್ನು ಸರಿಪಡಿಸುವ ಜವಬ್ದಾರಿಯಿಂದಾಗಿ ಸಾಕಾಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ, ಚೇತನ ಮತ್ತು ಧನಶ್ರೀ ಯೋಜನೆಯಿಂದಾಗಿ ಸಮಾಜದಲ್ಲಿರುವ ಶೋಷಿತ ವರ್ಗ ಕೀಳಿರಿಮೆಯನ್ನು ತೊರೆದು ಸ್ವಾವಲಂಬನೆಯ ಹಾದಿ ತುಳಿದು ಸಮುದಾಯದ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡಿ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಬೇಕೆಂದು ನಿಗಮ ಮಂಡಳಿಗಳು ಈ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಯೋಜನೆಯಲ್ಲಿ ದೊರೆಯುವ ಸಾಲ ಮತ್ತು ಸಹಾಯಧನವನ್ನು ಆದಾಯ ತರುವಂತಹ ಚಟುವಟಿಕೆಗಳಲ್ಲಿ ಬಳಸಿ ದುಡಿಮೆಯಲ್ಲಿ ತೊಡಗಬೇಕು ಎಂದು ಫಲಾನುಭವಿಗಳಿಗೆ ಸಲಹೆ ನೀಡಿದರು.

     ಪಡೆಯುವಂತಹ ಸಾಲವನ್ನು ಉದ್ಯಮದಲ್ಲಿ ಹೂಡಿಕೆ ಮಾಡಿ ವ್ಯವಹಾರ ನಡೆಸುವ ಚತುರತೆಯನ್ನು ತರಬೇತಿಯಿಂದ ಪಡೆದು ಆತ್ಮವಿಶ್ವಾಸ ವೃದ್ಧಿಸಬೇಕೆಂದು ಈ ತರಬೇತಿಯನ್ನು ಆಯೋಜಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಿರಿ ಸ್ವ ದುಡಿಮೆ ಮಾಡಿರಿ ಎಂದು ತಿಳಿ ಇಂದಿನ ಜಾಗತೀಕರಣ ಮಾರುಕಟ್ಟೆಯಲ್ಲಿ ತಾಂತ್ರಿಕ ಕುಶಲತೆಗಳನ್ನು ಉನ್ನತೀಕರಿಸಿಕೊಂಡು ಪಡೆದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿರಿ. ಮುಂದಿನ ಪೀಳಿಗೆಗೆ ಯೋಜನೆಯ ಮತ್ತು ಉದ್ದಿಮೆಯ ಫಲ ಉಳಿಯುವಂತೆ ಜಾಗ್ರತೆ ವಹಿಸಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಸ್ವ ಉದ್ಯೋಗದಿಂದ ಆತ್ಮಸಂತೋಷ, ತೃಪ್ತಿ ದೊರೆತು ಬದುಕು ಉಜ್ವಲಗೊಳ್ಳುತ್ತದೆ ಎಂದರು.

      ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ನಿರೀಕ್ಷಕ ಶ್ರೀಮತಿ ಸುವರ್ಣಮ್ಮ, ಉಪಸ್ಥಿತರಿದ್ದರು. ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರು ಶ್ರೀಮತಿ ಮಂಜುಳ ರವರು ಸರ್ಕಾರವು ಯೋಜನೆಯ ಉದ್ದೇಶಗಳನ್ನು ಸಾರ್ಥಕತೆ ಪಡಿಸುವ ದೃಷ್ಠಿಯಿಂದ ಇಂತಹ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ಫಲಾನುಭವಿಗಳು ತರಬೇತಿ ಅವಧಿಯಲ್ಲಿ ಕಲಿತ ಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಂಡು ಯಶಸ್ವಿ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಿ ಎಂದರು. ಕು.ನೇತ್ರಾವತಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಶ್ರೀಮತಿ ಲತಾಮಣಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link